- Kannada News Photo gallery Usain Bolt Birthday 5 surprising facts you never knew about the greatest sprinter of all time
Happy Birthday Usain Bolt: ಸಾರ್ವಕಾಲಿಕ ಶ್ರೇಷ್ಠ ಓಟಗಾರನ ಬಗ್ಗೆ ನಿಮಗೆ ತಿಳಿದಿರದ 5 ಆಶ್ಚರ್ಯಕರ ಸಂಗತಿಗಳಿವು
Happy Birthday Usain Bolt: ಒಲಂಪಿಕ್ಸ್‌ನಲ್ಲಿ ಒಟ್ಟು ಎಂಟು ಚಿನ್ನದ ಪದಕ ಗೆದ್ದಿರುವ ಬೋಲ್ಟ್, ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಏಕೈಕ ಓಟಗಾರ ಎನಿಸಿಕೊಂಡಿದ್ದಾರೆ.
Updated on:Aug 21, 2022 | 4:44 PM

ವಿಶ್ವದ ಅತ್ಯುತ್ತಮ ಓಟಗಾರ ಉಸೇನ್ ಬೋಲ್ಟ್ ಇಂದು ತಮ್ಮ 36ನೇ ವರ್ಷದ ಸಂಭ್ರಮದಲ್ಲಿದ್ದಾರೆ. ತಮ್ಮ ಚಿರತೆಯ ವೇಗದಿಂದ ಇಡೀ ಜಗತ್ತನ್ನೇ ಬೆರಗಾಗಿಸಿದ್ದ ಬೋಲ್ಟ್ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ಹೇಳಲಿದ್ದೇವೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಮೊದಲ ಬಾರಿಗೆ 100ಮೀ ಓಟದಲ್ಲಿ ಚಿನ್ನ ಗೆದ್ದಿದ್ದರು.

ಜೂನಿಯರ್ ಮಟ್ಟದಲ್ಲಿ 20 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 200 ಮೀ ಓಟವನ್ನು ಪೂರ್ಣಗೊಳಿಸಿದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಬೋಲ್ಟ್ ಪಾತ್ರರಾಗಿದ್ದಾರೆ.

ಜಮೈಕಾದ ಈ ಓಟಗಾರ 100ಮೀ, 200ಮೀ ಮತ್ತು 4x100ಮೀ ಓಟಗಳಲ್ಲಿ ದಾಖಲೆಗಳನ್ನು ಹೊಂದಿದ್ದಾರೆ. ಒಲಂಪಿಕ್ಸ್‌ನಲ್ಲಿ ಒಟ್ಟು ಎಂಟು ಚಿನ್ನದ ಪದಕ ಗೆದ್ದಿರುವ ಬೋಲ್ಟ್, ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಏಕೈಕ ಓಟಗಾರ ಎನಿಸಿಕೊಂಡಿದ್ದಾರೆ. ಅವರು 2008, 2012 ಮತ್ತು 2016 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಉಸೇನ್ ಬೋಲ್ಟ್ 200 ಮೀಟರ್ ಓಟದಲ್ಲಿ ವಿಶಿಷ್ಟ ದಾಖಲೆಯನ್ನು ಎರಡು ಬಾರಿ ಮುರಿದಿದ್ದಾರೆ. 2008 ರಲ್ಲಿ, 200 ಮೀ ಓಟವನ್ನು 19.30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದ ಬೋಲ್ಟ್, ಮುಂದಿನ ವರ್ಷ 19.19 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದರು.

ಬೋಲ್ಟ್ ಕ್ರಿಕೆಟ್ ಮತ್ತು ಫುಟ್ಬಾಲ್ನಲ್ಲಿ ವಿಶೇಷ ಉತ್ಸಾಹವನ್ನು ಹೊಂದಿದ್ದಾರೆ. ಜೊತೆಗೆ ಉಸೇನ್ ಫುಟ್ಬಾಲ್ ಆಟಕ್ಕೆ ದೊಡ್ಡ ಅಭಿಮಾನಿ ಕೂಡ. ಈ ಲೆಜೆಂಡರಿ ಓಟಗಾರ 2017 ರಲ್ಲಿ ತಮ್ಮ ವೃತ್ತಿ ಬದುಕಿನಿಂದ ನಿವೃತ್ತರಾದರು.
Published On - 4:44 pm, Sun, 21 August 22
