‘ನನ್ನ ಈ ಹೆಬ್ಬಯಕೆಯನ್ನು ಈಡೇರಿಸಿಕೊಂಡು ವಿದಾಯ ಹೇಳಬೇಕು’; ಡೇವಿಡ್ ಮಿಲ್ಲರ್

Updated on: Aug 12, 2026 | 8:56 PM

David Miller's 2027 World Cup Dream:2027ರ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸಲಿವೆ. ತವರಿನಲ್ಲಿ ಐಸಿಸಿ ಟ್ರೋಫಿ ಗೆದ್ದು ವೃತ್ತಿಜೀವನಕ್ಕೆ ಅಂತ್ಯ ಹಾಡಲು ಡೇವಿಡ್ ಮಿಲ್ಲರ್ ಬಯಸಿದ್ದಾರೆ. 2024ರ ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ, ದಕ್ಷಿಣ ಆಫ್ರಿಕಾಕ್ಕೆ ಇದು ತವರಿನಲ್ಲಿ ಮೊದಲ ವಿಶ್ವಕಪ್ ಗೆಲ್ಲಲು ಸುವರ್ಣಾವಕಾಶ ಎಂದು ಮಿಲ್ಲರ್ ಹೇಳಿದ್ದಾರೆ.

1 / 5
2027 ರ ಏಕದಿನ ವಿಶ್ವಕಪ್‌ಗೆ ಆಫ್ರಿಕಾ ಖಂಡ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ತಿಳಿದೆ ಇದೆ. ಈ ವಿಶ್ವ ಸಮರ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಹೀಗಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ಆಫ್ರಿಕಾ ತಂಡ ಇದುವರೆಗೆ ಏಕದಿನ ವಿಶ್ವಕಪ್ ಗೆಲ್ಲದಿರುವುದರಿಂದ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ(PC-PTI).

2 / 5
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಆಫ್ರಿಕನ್ ತಂಡ ಉತ್ತಮ ಪ್ರದರ್ಶನ ನೀಡಿದೆ. 2024 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ ಆಫ್ರಿಕಾ ತಂಡ ಭಾರತದ ವಿರುದ್ಧ ಸೋತಿತ್ತು. ಆ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವ ಸನಿಹದಲ್ಲಿತ್ತು. ಆದರೆ ನಿರ್ಣಾಯಕ ಸಮಯದಲ್ಲಿ ತಂಡದ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪತನ ತಂಡವನ್ನು ಸೋಲಿನ ದವಡೆಗೆ ತಳ್ಳಿತ್ತು(PC-PTI).

3 / 5
ಇದೀಗ 2003 ರ ನಂತರ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗುತ್ತಿದ್ದು, ಈ ಐಸಿಸಿ ಟ್ರೋಫಿಯನ್ನು ಗೆಲ್ಲುವ ಮೂಲಕ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡುವ ಇರಾದೆಯಲ್ಲಿ ಡೇವಿಡ್ ಮಿಲ್ಲರ್ ಇದ್ದಾರೆ. ಈ ಬಗ್ಗೆ ಜಿಯೋಸ್ಟಾರ್‌ ಜೊತೆ ಮಾತನಾಡಿದ ಮಿಲ್ಲರ್, "ಹೌದು, ಮುಂದಿನ ವರ್ಷದ ವಿಶ್ವಕಪ್ ಬಗ್ಗೆ ನಿಜವಾಗಿಯೂ ಉತ್ಸುಕನಾಗಿದ್ದೇನೆ. ವಿಶ್ವಕಪ್ ಗೆಲ್ಲುವುದು ನನ್ನ ಗುರಿಯಾಗಿದೆ. ನನ್ನ ವೃತ್ತಿಜೀವನವನ್ನು ಐಸಿಸಿ ಟ್ರೋಫಿಯೊಂದಿಗೆ ಕೊನೆಗೊಳಿಸಲು ಬಯಸುತ್ತೇನೆ(PC-PTI).

4 / 5
ಅದಕ್ಕೂ ಮುಂಚಿತವಾಗಿ ನಾನು ವಿಶ್ವಕಪ್ ತಂಡದ ಭಾಗವಾಗಲು ಇಷ್ಟಪಡುತ್ತೇನೆ. ಆದರೆ ನಾನು ತಂಡದಲ್ಲಿ ಇರುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ ಅವಕಾಶ ಸಿಕ್ಕರೆ ನಾನು ತಂಡಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಡಲು ಮತ್ತು ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ತವರಿನಲ್ಲಿ, ನನ್ನ ಅಭಿಮಾನಿಗಳ ಮುಂದೆ ಮತ್ತು ನಾನು ನನ್ನ ಎಲ್ಲಾ ಕ್ರಿಕೆಟ್ ಆಡಿದ ಸ್ಥಳದಲ್ಲಿ ಐಸಿಸಿ ಟ್ರೋಫಿ ಗೆಲ್ಲುವುದು ತುಂಬಾ ವಿಶೇಷವಾಗಿರುತ್ತದೆ ಎಂದಿದ್ದಾರೆ(PC-PTI).

5 / 5
ಮೇಲೆ ಹೇಳಿದಂತೆ ದಕ್ಷಿಣ ಆಫ್ರಿಕಾ ತಂಡ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಇದರಲ್ಲಿ ಏಕದಿನ ವಿಶ್ವಕಪ್ ಜೊತೆಗೆ ಟಿ20 ವಿಶ್ವಕಪ್ ಕೂಡ ಸೇರಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ತವರಿನಲ್ಲಿ ನಡೆಯಲಿದ್ದು, ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಪ್ರೋಟಿಯಸ್ ತಂಡವು ಇದುವರೆಗೆ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದು, ಅದರಲ್ಲಿ ಚಾಂಪಿಯನ್ಸ್ ಟ್ರೋಫಿ (1998) ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2025) ಸೇರಿದೆ(PC-PTI).

Loading...
Unable to load recommendations.
Follow Us