IPL 2023: ಮಿನಿ ಹರಾಜಿನಲ್ಲಿ ಅಧಿಕ ಬೆಲೆಗೆ ಮಾರಾಟವಾಗಬಹುದಾದ ಐವರು ಅನ್‌ಕ್ಯಾಪ್ಡ್ ಆಟಗಾರರಿವರು

IPL 2023: ಹರಾಜಿಗೆ ಸಾಕಷ್ಟು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಅಪ್ಪಟ ದೇಶೀ ಪ್ರತಿಭೆಗಳು ಸೇರಿದ್ದು, ದೇಶೀ ಟೂರ್ನಿಯಲ್ಲಿ ಅಬ್ಬರಿಸಿರುವ ಇವರಿಗೆ ಮಿನಿ ಹರಾಜಿನಲ್ಲಿ ಸಾಕಷ್ಟು ಹಣ ಸಿಗುವ ಸಾಧ್ಯತೆಗಳಿವೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

TV9 Web
| Updated By: ಪೃಥ್ವಿಶಂಕರ

Updated on:Dec 11, 2022 | 6:41 PM

ಐಪಿಎಲ್ 2023ರ ಮಿನಿ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಖರೀದಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹರಾಜಿಗೆ ಸಾಕಷ್ಟು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಅಪ್ಪಟ ದೇಶೀ ಪ್ರತಿಭೆಗಳು ಸೇರಿದ್ದು, ಈ ಆಟಗಾರರು ಇದುವರೆಗೆ ರಾಷ್ಟ್ರೀಯ ತಂಡದಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ. ಆದರೂ ದೇಶೀ ಟೂರ್ನಿಯಲ್ಲಿ ಅಬ್ಬರಿಸಿರುವ ಇವರೆಗೆ ಮಿನಿ ಹರಾಜಿನಲ್ಲಿ ಸಾಕಷ್ಟು ಹಣ ಸಿಗುವ ಸಾಧ್ಯತೆಗಳಿವೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

1 / 6
ಐಪಿಎಲ್ 2023 ರ ಹರಾಜಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ನಾರಾಯಣ ಜಗದೀಶನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಆದರೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಗದೀಸನ್  ಶತಕಗಳ ಸರಮಾಲೆ ಕಟ್ಟಿದ್ದರು. ಹೀಗಾಗಿ ಜಗದೀಸನ್ ಅಧಿಕ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆಗಳಿವೆ. ಕಳೆದ ವರ್ಷ ಚೆನ್ನೈ ಈ ಆಟಗಾರನನ್ನು ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತ್ತು

2 / 6
ಕೋಟಿಗಳ ಸುರಿಮಳೆಯಾಗಲಿರುವ ಅನ್‌ಕ್ಯಾಪ್ಡ್ ಆಟಗಾರರಲ್ಲಿ ಮುಂಬೈನ ಶಾಮ್ಸ್ ಮುಲಾನಿ ಕೂಡ ಸೇರಿದ್ದಾರೆ. ಮುಲಾನಿ ಅವರು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು ಈ ಟೂರ್ನಿಯಲ್ಲಿ ಅವರು 45 ವಿಕೆಟ್ ಪಡೆದಿದ್ದರು. ಇದರ ನಂತರ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ ಮುಲಾನಿ 10 ವಿಕೆಟ್ಗಳನ್ನು ಪಡೆದಿದ್ದರು.

3 / 6
ಕರ್ನಾಟಕದ ಬಲಗೈ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಈ ಬಾರಿಯ ಹರಾಜಿನಲ್ಲಿ  ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಗಳಿವೆ. ಮಹಾರಾಜ ಟಿ20 ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ಪರ ಕಣಕ್ಕಿಳಿದಿದ್ದ ಕಾವೇರಪ್ಪ 13 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು. ಇದರ ನಂತರ, ಕಾವೇರಪ್ಪ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ 6.36 ರ ಅತ್ಯುತ್ತಮ ಎಕಾನಮಿ ರೇಟ್‌ನೊಂದಿಗೆ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅನೇಕ ತಂಡಗಳಿಗೆ ವೇಗದ ಬೌಲರ್ ಅಗತ್ಯವಿದ್ದು, ಹೀಗಾಗಿ ಕಾವೇರಪ್ಪಗೆ ಅಧಿಕ ಮೊತ್ತ ಸಿಗುವ ಸಾಧ್ಯತೆಗಳಿವೆ.

4 / 6
ದೇಶೀಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಸಮರ್ಥ್ ವ್ಯಾಸ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 10 ಪಂದ್ಯಗಳನ್ನು ಆಡಿದ್ದ ವ್ಯಾಸ್ 443 ರನ್ ಗಳಿಸಿದ್ದರು. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಗ್ ಸಿಕ್ಸರ್‌ ಸಿಡಿಸಿ ಹೆಸರುವಾಸಿಯಾಗಿದ್ದ ಸಮರ್ಥ್​ಗೆ ಐಪಿಎಲ್​ನಲ್ಲಿ ಅದೃಷ್ಟ ಬಾಗಿಲು ತೆರೆಯಲಿದೆ.

5 / 6
19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ರವಿ ಕುಮಾರ್​ ಅವರು 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಇದರ ನಂತರ ಬಂಗಾಳ ಪರ ಸೈಯದ್ ಮುಷ್ತಾಕ್ ಟ್ರೋಫಿಗೆ ಪಾದಾರ್ಪಣೆ ಮಾಡಿದ ರವಿ ಆಡಿದ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ಹೀಗಾಗಿ ಇವರಿಗೂ ಐಪಿಎಲ್​ನಲ್ಲಿ ಹೆಚ್ಚು ಹಣ ಸಿಗುವ ಸಾಧ್ಯತೆಗಳಿವೆ.

6 / 6

Published On - 6:41 pm, Sun, 11 December 22

Follow us
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ

ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್

ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್

ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್

ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್

ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್

ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್

ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು

10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?