- Kannada News Photo gallery Cricket photos cricketer mayank agarwal and his wife aashita sood are blessed with a baby boy
ಗಂಡು ಮಗುವಿಗೆ ತಂದೆಯಾದ ಮಯಾಂಕ್ ಅಗರ್ವಾಲ್; ಮಗನ ಮುದ್ದಾದ ಹೆಸರೇನು ಗೊತ್ತಾ?
Mayank Agarwal: ಮಯಾಂಕ್ ಅಗರ್ವಾಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭವಾಗಿದ್ದು, ಅವರ ಪತ್ನಿ ಆಶಿತಾ ಸೂದ್ ಡಿಸೆಂಬರ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Updated on:Dec 11, 2022 | 11:09 AM

ಕಳಪೆ ಫಾರ್ಮ್ನಿಂದಾಗಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ವಿಫಲರಾದ ಕನ್ನಡಿಗ ಮಯಾಂಕ್ ಅಗರ್ವಾಲ್ ಐಪಿಎಲ್ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕೆಎಲ್ ರಾಹುಲ್ ಬಳಿಕ ಮಯಾಂಕ್ಗೆ ಪಂಜಾಬ್ ತಂಡದ ನಾಯಕತ್ವವಹಿಸಿದ್ದ ಫ್ರಾಂಚೈಸಿ, ಅವರನ್ನು ತಂಡದಿಂದಲೇ ಹೊರಹಾಕಿದೆ. ಆದರೆ ವೃತ್ತಿ ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುವ ಮಯಾಂಕ್ ಅಗರ್ವಾಲ್ ಮನೆಯಿಂದ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.

ಮಯಾಂಕ್ ಅಗರ್ವಾಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭವಾಗಿದ್ದು, ಅವರ ಪತ್ನಿ ಆಶಿತಾ ಸೂದ್ ಡಿಸೆಂಬರ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಯಾಂಕ್ ಅಗರ್ವಾಲ್ ಭಾನುವಾರ ತಮ್ಮ ಪತ್ನಿ ಮತ್ತು ಮಗನೊಂದಿಗಿನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಹಾಗೂ ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಮಯಾಂಕ್ಗೆ ಮಗನಿಗೆ ಅಯಾನ್ಶ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಗಂಡು ಮಗುವಿಗೆ ತಂದೆಯಾದ ಮಯಾಂಕ್ ಅಗರ್ವಾಲ್ಗೆ ಟೀಂ ಇಂಡಿಯಾದ ಹಲವು ಆಟಗಾರರು ಶುಭಾಷಯ ಕೋರಿದ್ದಾರೆ. ಮಯಾಂಕ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ. ಕೊಹ್ಲಿಯೊಂದಿಗೆ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್, ಅಜಿಂಕ್ಯಾ ರಹಾನೆ ಮತ್ತು ಅವರ ಪತ್ನಿ ಕೂಡ ದಂಪತಿಗೆ ಶುಭ ಹಾರೈಸಿದ್ದಾರೆ.

ಮಾಯಾಂಕ್ ಅಗರ್ವಾಲ್ ನಾಲ್ಕು ವರ್ಷಗಳ ಹಿಂದೆ ಅಷ್ಟ ಸೂದ್ ಅವರನ್ನು ವಿವಾಹವಾದರು. ಅನೇಕ ಕ್ರಿಕೆಟಿಗರು ಈ ದಂಪತಿಗಳ ಮದುವೆಗೆ ಹಾಜರಾಗಿ ಶುಭ ಹಾರೈಸಿದ್ದರು. ಮದುವೆ ನಂತರ ವೃತ್ತಿ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಮಯಾಂಕ್ಗೆ ಟೀಮ್ ಇಂಡಿಯಾದ ಕರೆ ಸಿಕ್ಕಿತು. ಅಲ್ಲದೆ ಐಪಿಎಲ್ ತಂಡದ ನಾಯಕತ್ವ ಕೂಡ ಸಿಕ್ಕಿತ್ತು.
Published On - 11:09 am, Sun, 11 December 22




