AB de Villiers: ಐಪಿಎಲ್​ನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ ಎಬಿಡಿಯ 5 ಅದ್ಭುತ ಇನ್ನಿಂಗ್ಸ್​ಗಳಿವು..!

AB de Villiers: ಈ ಬ್ಯಾಟ್ಸ್‌ಮನ್‌ನ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ಅವರು 184 ಪಂದ್ಯಗಳನ್ನು ಆಡಿದ್ದಾರೆ ಮತ್ತು 39.70 ಸರಾಸರಿಯಲ್ಲಿ 5162 ರನ್ ಗಳಿಸಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on: Nov 19, 2021 | 5:21 PM

ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಡಿವಿಲಿಯರ್ಸ್ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಆದರೆ ಅವರು ಫ್ರಾಂಚೈಸಿ ಕ್ರಿಕೆಟ್ ಆಡುತ್ತಿದ್ದರು. ಇದರ ಅಡಿಯಲ್ಲಿ, ಅವರು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಅವರು ಐಪಿಎಲ್-2021ರಲ್ಲೂ ಆಡಿದ್ದಾರೆ. ಡಿವಿಲಿಯರ್ಸ್ 2008 ರಿಂದ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ತಮ್ಮ IPL ವೃತ್ತಿಜೀವನವನ್ನು ಪ್ರಾರಂಭಿಸಿದರೂ, ಆದರೆ ನಾಲ್ಕನೇ ಋತುವಿನಲ್ಲಿ ಅವರು RCB ಯೊಂದಿಗೆ ಬಂದರು. ಈ ಬ್ಯಾಟ್ಸ್‌ಮನ್‌ನ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ಅವರು 184 ಪಂದ್ಯಗಳನ್ನು ಆಡಿದ್ದಾರೆ ಮತ್ತು 39.70 ಸರಾಸರಿಯಲ್ಲಿ 5162 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಮೂರು ಶತಕಗಳು ಮತ್ತು 40 ಅರ್ಧ ಶತಕಗಳನ್ನು ಗಳಿಸಿದರು. ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಅವರ ಟಾಪ್-5 ಇನ್ನಿಂಗ್ಸ್‌ಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

1 / 6
ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಅವರ ಗರಿಷ್ಠ ಸ್ಕೋರ್ ಔಟಾಗದೆ 133 ರನ್ ಆಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು. ಮೇ 10, 2015 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಿಸ್ಟರ್ 360 ಡಿಗ್ರಿ ಎಂದು ಕರೆಯಲ್ಪಡುವ ಈ ಆಟಗಾರ 59 ಎಸೆತಗಳಲ್ಲಿ 19 ಬೌಂಡರಿ, ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಅಜೇಯ 133 ರನ್ ಗಳಿಸಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದಿದ್ದರು. ಈ ಇನ್ನಿಂಗ್ಸ್‌ನಿಂದಾಗಿ ಆರ್‌ಸಿಬಿ ಒಂದು ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ರನ್ ಬೆನ್ನಟ್ಟಿದ ಮುಂಬೈ ಏಳು ವಿಕೆಟ್‌ಗೆ 196 ರನ್ ಗಳಿಸಲಷ್ಟೆ ಶಕ್ತವಾಯಿತು.

2 / 6
ಈ ಇನ್ನಿಂಗ್ಸ್ ನಂತರ, ಡಿವಿಲಿಯರ್ಸ್ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 129 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಸುರೇಶ್ ರೈನಾ ಸಾರಥ್ಯದ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಡಿವಿಲಿಯರ್ಸ್ ಭರ್ಜರಿ ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸಿದರು. ಡಿವಿಲಿಯರ್ಸ್ 52 ಎಸೆತಗಳಲ್ಲಿ 10 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ದು, ಆರ್​ಸಿಬಿ ಮೂರು ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಗುಜರಾಜ್ ತಂಡವು ಕೇವಲ 104 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು RCB 144 ರನ್‌ಗಳ ಜಯ ಸಾಧಿಸಿತು.

3 / 6
ಆರ್‌ಸಿಬಿ ಪರ ಮಾತ್ರ ಡಿವಿಲಿಯರ್ಸ್ ಬ್ಯಾಟ್ ಅಬ್ಬರಿಸಲಿಲ್ಲ. ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವಾಗಲೂ ಬಿರುಗಾಳಿ ಎಬ್ಬಿಸಿದ್ದರು. ಈ ಬಲಗೈ ಬ್ಯಾಟ್ಸ್‌ಮನ್ 23 ಏಪ್ರಿಲ್ 2009 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೆಹಲಿ ಪರ ಆಡುತ್ತಿರುವಾಗ ತನ್ನ ಮೊದಲ IPL ಶತಕವನ್ನು ಗಳಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಈ ಪೈಕಿ ಡಿವಿಲಿಯರ್ಸ್ ಔಟಾಗದೆ 105 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಡಿವಿಲಿಯರ್ಸ್ 54 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 6 ಸಿಕ್ಸರ್‌ಗಳನ್ನು ಸಿಡಿಸಿದರು.

4 / 6
ಈ ಮೂರು ಇನ್ನಿಂಗ್ಸ್‌ಗಳ ನಂತರ, ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಅವರ ಗರಿಷ್ಠ ಸ್ಕೋರ್ ಔಟಾಗದೆ 90 ರನ್ ಆಗಿದೆ. 2018 ರಲ್ಲಿ ಅವರು RCB ಗಾಗಿ ಆಡುವಾಗ ತಮ್ಮ ಹಳೆಯ ತಂಡ ದೆಹಲಿ ವಿರುದ್ಧ ಈ ಸಾಧನೆ ಮಾಡಿದರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಐದು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಆರ್‌ಸಿಬಿ ತಂಡ 29 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಡಿವಿಲಿಯರ್ಸ್ 39 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಡಿವಿಲಿಯರ್ಸ್ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು.

5 / 6
ಡಿವಿಲಿಯರ್ಸ್ ತನ್ನ ಬ್ಯಾಟಿಂಗ್‌ನಿಂದ RCB ಗೆ ಮತ್ತೊಂದು ಪಂದ್ಯವನ್ನು ಗೆದ್ದುಕೊಟ್ಟರು. ಈ ಪಂದ್ಯವನ್ನು 4 ಮೇ 2014 ರಂದು ಆಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 10.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 59 ರನ್‌ ಗಳಿಸಿತ್ತು. ನಂತರ ಡಿವಿಲಿಯರ್ಸ್ ಜವಾಬ್ದಾರಿಯನ್ನು ನಿಭಾಯಿಸಿದರು ಮತ್ತು 41 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ ಅಜೇಯ 89 ರನ್ ಗಳಿಸಿದರು.

6 / 6
Follow us
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ

ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ

ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು

ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್

ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್

ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ

ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ