AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abhinav Manohar: ಅಭಿನವ್ ಮನೋಹರ್ ಕರ್ನಾಟಕದ ಸಿಕ್ಸರ್ ಕಿಂಗ್

Abhinav Manohar: ಅಭಿನವ್ ಮನೋಹರ್ ಐಪಿಎಲ್ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. 2022 ರಿಂದ ಗುಜರಾತ್ ತಂಡ ಭಾಗವಾಗಿರುವ ಅಭಿನವ್ 15 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 10 ಭರ್ಜರಿ ಸಿಕ್ಸ್ ಹಾಗೂ 21 ಫೋರ್​ಗಳೊಂದಿಗೆ ಒಟ್ಟು 231 ರನ್ ಕಲೆಹಾಕಿದ್ದಾರೆ. ಇನ್ನು ಈ ಬಾರಿ ಮೆಗಾ ಹರಾಜು ನಡೆಯಲಿರುವುದರಿಂದ ಅಭಿನವ್ ಮನೋಹರ್ ಆಕ್ಷನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಝಾಹಿರ್ ಯೂಸುಫ್
|

Updated on: Aug 29, 2024 | 2:39 PM

Share
ಮಹಾರಾಜ ಟ್ರೋಫಿ 2024 ರಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಬ್ಯಾಟರ್ ಅಭಿನವ್ ಮನೋಹರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಬರಿ 52 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಮಹಾರಾಜ ಟ್ರೋಫಿ ಇತಿಹಾಸದಲ್ಲೇ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಅಭಿನವ್ ಪಾಲಾಗಿದೆ.

1 / 5
ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ತಾಹ ಹೆಸರಿನಲ್ಲಿತ್ತು. 2023 ರ ಸೀಸನ್​ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕಿಳಿದಿದ್ದ ತಾಹ 12 ಪಂದ್ಯಗಳಿಂದ 32 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ಮಹಾರಾಜ ಟೂರ್ನಿಯ ಒಂದೇ ಸೀಸನ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದಿದ್ದರು.

2 / 5
ಆದರೆ ಈ ಬಾರಿಯ ಟೂರ್ನಿಯಲ್ಲಿ ಅಭಿನವ್ ಮನೋಹರ್ ಸಿಡಿಲಬ್ಬರ ಪ್ರದರ್ಶಿಸಿದ್ದಾರೆ. ಆಡಿದ 10 ಪಂದ್ಯಗಳಲ್ಲಿ ಸ್ಪೋಟಕ ಇನಿಂಗ್ಸ್ ಆಡಿರುವ ಮನೋಹರ್ 52 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಮಹಾರಾಜ ಟಿ20 ಟೂರ್ನಿಯ ಆವೃತ್ತಿಯೊಂದರಲ್ಲಿ 50 ಸಿಕ್ಸ್​ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

3 / 5
ಅಷ್ಟೇ ಅಲ್ಲದೆ ಮಹಾರಾಜ ಟಿ20 ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ಮನೋಹರ್ ತಮ್ಮದಾಗಿಸಿಕೊಂಡಿದ್ದಾರೆ. 2022ರ ಸೀಸನ್​ನಲ್ಲಿ 27 ಸಿಕ್ಸ್ ಬಾರಿಸಿದ್ದ ಅಭಿನವ್, 2023 ರಲ್ಲಿ 16 ಸಿಕ್ಸ್ ಸಿಡಿಸಿದ್ದರು. ಇದೀಗ 52 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ 95 ಸಿಕ್ಸ್​ಗಳೊಂದಿಗೆ ಮಹಾರಾಜ ಟಿ20 ಟೂರ್ನಿಯ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

4 / 5
ವಿಶೇಷ ಎಂದರೆ ಈ ಬಾರಿಯ ಟೂರ್ನಿಯಲ್ಲಿ ಅಭಿನವ್ ಮಹೋರ್ ಬ್ಯಾಟ್​ನಿಂದ ಮೂಡಿಬಂದಿರುವುದು 11 ಫೋರ್​ಗಳು ಮಾತ್ರ. ಅಂದರೆ 10 ಪಂದ್ಯಗಳಿಂದ ಕಲೆಹಾಕಿರುವ 507 ರನ್​ಗಳಲ್ಲಿ 312 ರನ್​ಗಳು ಮೂಡಿಬಂದಿರುವುದು ಬರೀ ಸಿಕ್ಸ್​ಗಳಿಂದ ಎಂಬುದು ವಿಶೇಷ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ