T20 World Cup 2024: ಅಫ್ಘಾನ್ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಪ್ಲೇಯರ್ ವಿಶ್ವಕಪ್​ನಿಂದ ಔಟ್..!

Updated on: Jun 16, 2024 | 8:57 PM

T20 World Cup 2024: ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ತಂಡದ ಸ್ಟಾರ್ ಬೌಲರ್ ಇಡೀ ಪಂದ್ಯಾವಳಿಯಲ್ಲಿ ಹೊರಬಿದ್ದಿದ್ದಾರೆ. ತಂಡದ ಸ್ಟಾರ್ ಬೌಲರ್ ಮುಜೀಬ್ ಉರ್ ರೆಹಮಾನ್ ಟೂರ್ನಿಯ ಉಳಿದ ಪಂದ್ಯಗಳನ್ನು ಆಡುವುದಿಲ್ಲ ಎಂದು ಮಂಡಳಿ ಹೇಳಿದೆ. ಬೆರಳಿನ ಗಾಯದಿಂದಾಗಿ ಅವರು ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.

1 / 6
ಅಫ್ಘಾನಿಸ್ತಾನ ತಂಡ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟಿ20 ವಿಶ್ವಕಪ್‌ನ ಸೂಪರ್-8 ಗೆ ಅರ್ಹತೆ ಪಡೆದಿದೆ. ತಂಡವು ತನ್ನ ಕೊನೆಯ ಗುಂಪು ಸುತ್ತಿನ ಪಂದ್ಯವನ್ನು ಇನ್ನೂ ಆಡಬೇಕಾಗಿದೆ. ಆದರೆ, ಇದಕ್ಕೂ ಮುನ್ನ ತಂಡಕ್ಕೆ ಹಿನ್ನಡೆಯುಂಟಾಗಿದೆ.

ಅಫ್ಘಾನಿಸ್ತಾನ ತಂಡ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟಿ20 ವಿಶ್ವಕಪ್‌ನ ಸೂಪರ್-8 ಗೆ ಅರ್ಹತೆ ಪಡೆದಿದೆ. ತಂಡವು ತನ್ನ ಕೊನೆಯ ಗುಂಪು ಸುತ್ತಿನ ಪಂದ್ಯವನ್ನು ಇನ್ನೂ ಆಡಬೇಕಾಗಿದೆ. ಆದರೆ, ಇದಕ್ಕೂ ಮುನ್ನ ತಂಡಕ್ಕೆ ಹಿನ್ನಡೆಯುಂಟಾಗಿದೆ.

2 / 6

ಅದೆನೆಂದರೆ ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ತಂಡದ ಸ್ಟಾರ್ ಬೌಲರ್ ಇಡೀ ಪಂದ್ಯಾವಳಿಯಲ್ಲಿ ಹೊರಬಿದ್ದಿದ್ದಾರೆ. ತಂಡದ ಸ್ಟಾರ್ ಬೌಲರ್ ಮುಜೀಬ್ ಉರ್ ರೆಹಮಾನ್ ಟೂರ್ನಿಯ ಉಳಿದ ಪಂದ್ಯಗಳನ್ನು ಆಡುವುದಿಲ್ಲ ಎಂದು ಮಂಡಳಿ ಹೇಳಿದೆ.

3 / 6

ಬೆರಳಿನ ಗಾಯದಿಂದಾಗಿ ಅವರು ಈ ಟೂರ್ನಿಯಿಂದ ಹೊರಗುಳಿದಿದ್ದಾರೆ. ಉಗಾಂಡಾ ವಿರುದ್ಧದ ಪಂದ್ಯದ ನಂತರ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಾಗಲೀ ಅಥವಾ ಪಪುವಾ ನ್ಯೂಗಿನಿ ವಿರುದ್ಧವಾಗಲೀ ಆಡಲಿಲ್ಲ. ಹೀಗಾಗಿ ಈ ಬೌಲರ್‌ನ ಬದಲಿ ಆಟಗಾರನನ್ನು ಸಹ ಅಫ್ಘಾನಿಸ್ತಾನ ಮಂಡಳಿ ಘೋಷಿಸಿದೆ.

4 / 6

ಮುಜೀಬ್ ಬದಲಿಗೆ ತಂಡವು ಯಾವುದೇ ಬೌಲರ್‌ಗೆ ಅವಕಾಶ ನೀಡದೆ ಆರಂಭಿಕ ಹಜರತುಲ್ಲಾ ಝಜೈಗೆ ಅವಕಾಶ ನೀಡಿದೆ. ತಂಡದ ಕೋಚ್ ಜೊನಾಥನ್ ಟ್ರಾಟ್ ಪ್ರಕಾರ, ತಂಡವು ಈಗಾಗಲೇ ಮುಜೀಬ್ ಬದಲಿಗೆ ನೂರ್ ಅಹ್ಮದ್ ರೂಪದಲ್ಲಿ ಬೌಲರ್​ ಅನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಹಜರತುಲ್ಲಾ ಝಜೈ ಆಗಮನದಿಂದ ತಂಡದ ಬ್ಯಾಟಿಂಗ್ ಬಲಗೊಳ್ಳಲಿದೆ ಎಂದಿದ್ದಾರೆ.

5 / 6

ಅಫ್ಘಾನಿಸ್ತಾನ ಪರ ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಝಜೈ. ಅವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ ಅಜೇಯ 162 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 16 ಸಿಕ್ಸರ್‌ಗಳು ಸೇರಿದ್ದವು. ಇದು ತಂಡದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ವೈಯಕ್ತಿಕ ಇನ್ನಿಂಗ್ಸ್ ಆಗಿದೆ . ಫೆಬ್ರವರಿಯಿಂದ ಝಜೈ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. ಆದಾಗ್ಯೂ, ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ ಅವರು ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದಾರೆ.

6 / 6

ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಒಮರ್ಝೈ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಂಗ್ಯಾಲ್ ಖರೋಟಿ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್, ಹಜರತುಲ್ಲಾ ಝಜೈ. ಮೀಸಲು ಆಟಗಾರ: ಸೇದಿಕ್ ಅಟಲ್, ಸಲೀಮ್ ಸಫಿ

Loading...
Unable to load recommendations.
Follow Us