IPL 2023: ಐಪಿಎಲ್ಗೆ ಅಫ್ಘಾನಿಸ್ತಾನದ 7ನೇ ಆಟಗಾರ ಪಾದಾರ್ಪಣೆ
IPL 2023 Kannada:
Updated on: Apr 19, 2023 | 10:07 PM

IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ಗೆ ಅಫ್ಘಾನಿಸ್ತಾನದ ಏಳನೇ ಆಟಗಾರ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಎಂದರೆ ಕಳೆದ ಒಂದು ದಶಕದಲ್ಲಿ ರೂಪುಗೊಂಡ ಅಫ್ಗಾನಿಸ್ತಾನ್ ಕ್ರಿಕೆಟ್ ತಂಡದ ಆಟಗಾರರು ಐಪಿಎಲ್ಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಐಪಿಎಲ್ನಲ್ಲಿ ಕಾಣಿಸಿಕೊಂಡ ಮೊದಲ ಅಘ್ಘಾನಿಸ್ತಾನ್ ಆಟಗಾರ ರಶೀದ್ ಖಾನ್. 2017 ರಲ್ಲಿ ಎಸ್ಆರ್ಹೆಚ್ ಪರ ಕಣಕ್ಕಿಳಿದಿದ್ದ ರಶೀದ್ ಖಾನ್ ಹಿಂತಿರುಗಿ ನೋಡಿಲ್ಲ. ಅಷ್ಟೇ ಅಲ್ಲದೆ ಆ ಬಳಿಕ ಪ್ರತಿ ವರ್ಷ ಅಫ್ಘಾನಿಸ್ತಾನ್ ತಂಡದ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಪಟ್ಟಿಗೆ ಹೊಸ ಸೇರ್ಪಡೆ ನವೀನ್ ಉಲ್ ಹಕ್. ಅಫ್ಘಾನಿಸ್ತಾನ್ ತಂಡದ ಯುವ ವೇಗಿ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್ ಆಡಿದ 7ನೇ ಅಫ್ಘಾನ್ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ನಲ್ಲಿ ಕಣಕ್ಕಿಳಿದ 6 ಅಫ್ಘಾನಿಸ್ತಾನ್ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

1- ರಶೀದ್ ಖಾನ್: ಈ ಹಿಂದೆ ಎಸ್ಆರ್ಹೆಚ್ ಪರ ಆಡಿದ್ದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ಉಪನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ.

2- ಮೊಹಮ್ಮದ್ ನಬಿ: ಎಸ್ಆರ್ಹೆಚ್ ಹಾಗೂ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್ರೌಂಡರ್ ಮೊಹಮ್ಮದ್ ನಬಿ ಈ ಬಾರಿಯ ಐಪಿಎಲ್ಗೆ ಆಯ್ಕೆಯಾಗಿಲ್ಲ.

3- ಮುಜೀಬ್ ಉರ್ ರೆಹಮಾನ್: ಪಂಜಾಬ್ ಕಿಂಗ್ಸ್ ಹಾಗೂ ಎಸ್ಆರ್ಹೆಚ್ ಪರ ಆಡಿರುವ ಯುವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

4- ಫಝಲ್ ಹಕ್ ಫಾರೂಖಿ: ಎಡಗೈ ವೇಗಿ ಫಝಲ್ ಹಕ್ ಫಾರೂಖಿ ಪ್ರಸ್ತುತ ಎಸ್ಆರ್ಹೆಚ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.

5- ರಹಮಾನುಲ್ಲಾ ಗುರ್ಬಾಝ್: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಹಮಾನುಲ್ಲಾ ಗುರ್ಬಾಝ್ ಕೆಕೆಆರ್ ಪರ ಆಡುತ್ತಿದ್ದಾರೆ.

6- ನೂರ್ ಅಹ್ಮದ್: ಯುವ ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ.

7- ನವೀನ್ ಉಲ್ ಹಕ್: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ನವೀನ್ ಉಲ್ ಹಕ್ ಐಪಿಎಲ್ ಆಡಿದ 7ನೇ ಅಫ್ಘಾನ್ ಆಟಗಾರ ಎನಿಸಿಕೊಂಡಿದ್ದಾರೆ.
