IPL 2023: ಐಪಿಎಲ್​ಗೆ ಅಫ್ಘಾನಿಸ್ತಾನದ 7ನೇ ಆಟಗಾರ ಪಾದಾರ್ಪಣೆ

IPL 2023 Kannada:

TV9 Web
| Updated By: ಝಾಹಿರ್ ಯೂಸುಫ್

Updated on: Apr 19, 2023 | 10:07 PM

IPL 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ಗೆ ಅಫ್ಘಾನಿಸ್ತಾನದ ಏಳನೇ ಆಟಗಾರ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಎಂದರೆ ಕಳೆದ ಒಂದು ದಶಕದಲ್ಲಿ ರೂಪುಗೊಂಡ ಅಫ್ಗಾನಿಸ್ತಾನ್ ಕ್ರಿಕೆಟ್​ ತಂಡದ ಆಟಗಾರರು ಐಪಿಎಲ್​ಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

1 / 10
ಐಪಿಎಲ್​ನಲ್ಲಿ ಕಾಣಿಸಿಕೊಂಡ ಮೊದಲ ಅಘ್ಘಾನಿಸ್ತಾನ್ ಆಟಗಾರ ರಶೀದ್ ಖಾನ್. 2017 ರಲ್ಲಿ ಎಸ್​ಆರ್​ಹೆಚ್ ಪರ ಕಣಕ್ಕಿಳಿದಿದ್ದ ರಶೀದ್ ಖಾನ್ ಹಿಂತಿರುಗಿ ನೋಡಿಲ್ಲ. ಅಷ್ಟೇ ಅಲ್ಲದೆ ಆ ಬಳಿಕ ಪ್ರತಿ ವರ್ಷ ಅಫ್ಘಾನಿಸ್ತಾನ್ ತಂಡದ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2 / 10
ಈ ಪಟ್ಟಿಗೆ ಹೊಸ ಸೇರ್ಪಡೆ ನವೀನ್ ಉಲ್ ಹಕ್. ಅಫ್ಘಾನಿಸ್ತಾನ್ ತಂಡದ ಯುವ ವೇಗಿ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್ ಆಡಿದ 7ನೇ ಅಫ್ಘಾನ್ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್​ನಲ್ಲಿ ಕಣಕ್ಕಿಳಿದ 6 ಅಫ್ಘಾನಿಸ್ತಾನ್ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

3 / 10
1- ರಶೀದ್ ಖಾನ್: ಈ ಹಿಂದೆ ಎಸ್​ಆರ್​ಹೆಚ್ ಪರ ಆಡಿದ್ದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ಉಪನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ.

4 / 10
2- ಮೊಹಮ್ಮದ್ ನಬಿ: ಎಸ್​ಆರ್​ಹೆಚ್ ಹಾಗೂ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್​ರೌಂಡರ್ ಮೊಹಮ್ಮದ್ ನಬಿ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿಲ್ಲ.

5 / 10
3- ಮುಜೀಬ್ ಉರ್ ರೆಹಮಾನ್: ಪಂಜಾಬ್ ಕಿಂಗ್ಸ್ ಹಾಗೂ ಎಸ್​ಆರ್​ಹೆಚ್​ ಪರ ಆಡಿರುವ ಯುವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

6 / 10
4- ಫಝಲ್​ ಹಕ್ ಫಾರೂಖಿ: ಎಡಗೈ ವೇಗಿ ಫಝಲ್ ಹಕ್ ಫಾರೂಖಿ ಪ್ರಸ್ತುತ ಎಸ್​ಆರ್​ಹೆಚ್​ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.

7 / 10
5- ರಹಮಾನುಲ್ಲಾ ಗುರ್ಬಾಝ್: ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಹಮಾನುಲ್ಲಾ ಗುರ್ಬಾಝ್ ಕೆಕೆಆರ್ ಪರ ಆಡುತ್ತಿದ್ದಾರೆ.

8 / 10
6- ನೂರ್ ಅಹ್ಮದ್: ಯುವ ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ.

9 / 10
7- ನವೀನ್ ಉಲ್ ಹಕ್: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ನವೀನ್ ಉಲ್ ಹಕ್ ಐಪಿಎಲ್​ ಆಡಿದ 7ನೇ ಅಫ್ಘಾನ್ ಆಟಗಾರ ಎನಿಸಿಕೊಂಡಿದ್ದಾರೆ.

10 / 10
Follow us