Ajinkya Rahane: ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಪಂದ್ಯಶ್ರೇಷ್ಠ ಸ್ವೀಕರಿಸುವಾಗ ಅಜಿಂಕ್ಯಾ ರಹಾನೆ ಹೇಳಿದ್ದೇನು ನೋಡಿ

Updated on: Apr 24, 2023 | 11:12 AM

KKR vs CSK, IPL 2023: ಕೆಕೆಆರ್ ವಿರುದ್ಧ ನೀಡಿದ ಪ್ರದರ್ಶನಕ್ಕಾಗಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ವಿಶೇಷ ಎಂದರೆ, ಏಳು ಐಪಿಎಲ್ ಸೀಸನ್​ಗಳ ಬಳಿಕ ರಹಾನೆ ಮೊದಲ ಬಾರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

1 / 8
ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2023ರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 49 ರನ್​ಗಳ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2023ರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 49 ರನ್​ಗಳ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

2 / 8

ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಅವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಸಿಎಸ್​ಕೆ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 235 ರನ್ಸ್. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಹಾನೆ ಕೇವಲ 29 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 71 ರನ್ ಚಚ್ಚಿದರು.

3 / 8

ಈ ಅದ್ಭುತ ಪ್ರದರ್ಶನಕ್ಕಾಗಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ವಿಶೇಷ ಎಂದರೆ ಏಳು ಐಪಿಎಲ್ ಸೀಸನ್​ಗಳ ಬಳಿಕ ರಹಾನೆ ಮೊದಲ ಬಾರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

4 / 8

ಈ ಸಂದರ್ಭ ಮಾತನಾಡಿದ ರಹಾನೆ, ನಾನು ಸ್ಪಷ್ಟ ಮನಸ್ಥಿತಿಯನ್ನು ಹೊಂದಿದ್ದೆ. ನೀವು ಕೇಳುವ ವಿಷಯ ಚೆನ್ನಾಗಿದ್ದರೆ, ನಿಮ್ಮ ಮನಸ್ಸು ಸರಿಯಾಗಿದ್ದರೆ ಎಲ್ಲವೂ ಅದ್ಭುತವಾಗಿರುತ್ತದೆ. ನಾನು ಆನಂದಿಸುತ್ತಾ ನನ್ನ ಆಟವನ್ನು ಆಡಿದೆ ಎಂದು ರಹಾನೆ ಹೇಳಿದ್ದಾರೆ.

5 / 8

ಈ ವಿಕೆಟ್ ಸ್ವಲ್ಪ ಜಿಗುಟಾಗಿತ್ತು. ಆದರೆ, ಲಯಕಂಡುಕೊಂಡರೆ ರನ್ ಗಳಿಸಲು ಇಲ್ಲಿ ಉತ್ತಮ ಅವಕಾಶವಿದೆ. ನಮ್ಮ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಬಳಿಕ ನಾನು ನನ್ನ ಆಟವನ್ನು ಶುರು ಮಾಡಿದೆ, ಅದೇ ವೇಗವನ್ನು ಕಾಯ್ದುಕೊಳ್ಳುವುದು ನನ್ನ ಗುರಿಯಾಗಿತ್ತು - ಅಜಿಂಕ್ಯಾ ರಹಾನೆ.

6 / 8

ನಾನು ನನ್ನ ಎಲ್ಲ ಅರ್ಧಶತಕವನ್ನು ಇಷ್ಟಪಡುತ್ತೇನೆ. ನನಗನಿಸುವ ಪ್ರಕಾರ ನನ್ನ ಅದ್ಭುತ ಎನ್ನುವ ಅರ್ಧಶತಕ ಇನ್ನಷ್ಟೆ ಬರಬೇಕಿದೆ. ಇಲ್ಲಿ ಕಲಿಯಲು ಸಾಕಷ್ಟು ಅವಕಾಶವಿದೆ. ನಾನು ಧೋನಿ ನಾಯಕತ್ವದಡಿಯಲ್ಲಿ ಅನೇಕ ಪಂದ್ಯಗಳನ್ನು ಭಾರತ ಪರ ಆಡಿದ್ದೇನೆ. ಈಗ ಸಿಎಸ್​ಕೆ ತಂಡದ ಪರವಾಗಿಯು ಆಡುತ್ತಿದ್ದೇನೆ ಎಂಬುದು ರಹಾನೆ ಮಾತು.

7 / 8

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರಹಾನೆ ಅವರ ಅಜೇಯ 71 ರನ್, ಶಿವಂ ದುಬೆ 21 ಎಸೆತಗಳಲ್ಲಿ 50 ಮತ್ತು ಡೆವೊನ್ ಕಾನ್ವೇ 40 ಎಸೆತಗಳಲ್ಲಿ 56 ರನ್​ಗಳನ್ನ ಸಿಡಿಸುವ ಮೂಲಕ ಎದುರಾಳಿಗೆ 236 ರನ್​ಗಳ ಕಠಿಣ ಟಾರ್ಗೆಟ್ ನೀಡಿತು.

8 / 8

ಬೃಹತ್​ ಮೊತ್ತ ಬೆನ್ನಟ್ಟಿದ ಕೆಕೆಆರ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಜೇಸನ್ ರಾಯ್ 61 ರನ್ ಮತ್ತು ರಿಂಕು ಸಿಂಗ್ ಅಜೇಯ 53ರನ್ ಗಳನ್ನು ಬಾರಿಸಿ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸಿದರಾದರೂ ಸಾಧ್ಯವಾಗಲಿಲ್ಲ.

Published On - 11:12 am, Mon, 24 April 23

Loading...
Unable to load recommendations.
Follow Us