ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಗಲಿದೆ ದೊಡ್ಡ ಮೊತ್ತದ ಬಹುಮಾನ

Updated on: Mar 01, 2026 | 4:56 PM

T20 World Cup 2026: 2026ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಸೂಪರ್ 8 ಸುತ್ತಿನಲ್ಲೇ ನಿರ್ಗಮಿಸಿದೆ. ಕೇವಲ ಒಂದು ಪಂದ್ಯ ಗೆದ್ದು ಗ್ರೂಪ್ 2ರಲ್ಲಿ ಮೂರನೇ ಸ್ಥಾನ ಪಡೆದರೂ, ಐಸಿಸಿಯಿಂದ ಕೋಟ್ಯಂತರ ರೂಪಾಯಿಗಳ ಬಹುಮಾನ ಪಾಕಿಸ್ತಾನಕ್ಕೆ ಸಿಗಲಿದೆ. ಟೂರ್ನಿಯಲ್ಲಿ ಭಾಗವಹಿಸಿದ್ದಕ್ಕೆ 3.5 ಕೋಟಿ ರೂ. ಮತ್ತು ನಾಲ್ಕು ಗೆಲುವುಗಳಿಗೆ 11.2 ಕೋಟಿ ರೂ. ಸೇರಿ ಒಟ್ಟು 14.7 ಕೋಟಿ ರೂ. ಪಾಕ್‌ಗೆ ದೊರೆಯಲಿದೆ.

1 / 5
2026 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಪ್ರಯಾಣ ಸೂಪರ್ 8 ಸುತ್ತಿನಲ್ಲೇ ಅಂತ್ಯಗೊಂಡಿದೆ. ಈ ಸುತ್ತಿನಲ್ಲಿ ಕೇವಲ ಒಂದು ಪಂದ್ಯವನ್ನು ಗೆಲ್ಲಲಷ್ಟೇ ಶಕ್ತವಾದ ಪಾಕಿಸ್ತಾನ ಗ್ರೂಪ್ 2 ರಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಆದಾಗ್ಯೂ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿಯಿಂದ ಕೋಟ್ಯಂತರ ರೂಪಾಯಿಗಳ ಬಹುಮಾನವೂ ಸಿಗಲಿದೆ.

2026 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಪ್ರಯಾಣ ಸೂಪರ್ 8 ಸುತ್ತಿನಲ್ಲೇ ಅಂತ್ಯಗೊಂಡಿದೆ. ಈ ಸುತ್ತಿನಲ್ಲಿ ಕೇವಲ ಒಂದು ಪಂದ್ಯವನ್ನು ಗೆಲ್ಲಲಷ್ಟೇ ಶಕ್ತವಾದ ಪಾಕಿಸ್ತಾನ ಗ್ರೂಪ್ 2 ರಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಆದಾಗ್ಯೂ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಐಸಿಸಿಯಿಂದ ಕೋಟ್ಯಂತರ ರೂಪಾಯಿಗಳ ಬಹುಮಾನವೂ ಸಿಗಲಿದೆ.

2 / 5

2024 ರ ಟಿ20 ವಿಶ್ವಕಪ್‌ಗಾಗಿ ಐಸಿಸಿ ಸರಿಸುಮಾರು 102 ಕೋಟಿ ರೂಗಳನ್ನು ಬಹುಮಾನಕ್ಕಾಗಿ ಮೀಸಲಿರಿಸಿತ್ತು. ಈ ಬಾರಿಯೂ ಅದೇ ಮೊತ್ತವನ್ನು ನಿರೀಕ್ಷಿಸಲಾಗಿದೆ. 5 ಮತ್ತು 8 ನೇ ಸ್ಥಾನಗಳ ನಡುವೆ ಟೂರ್ನಿಯನ್ನು ಮುಗಿಸಿದ ಪಾಕಿಸ್ತಾನಕ್ಕೆ ಸರಿಸುಮಾರು 3.5 ಕೋಟಿ ರೂ. ಬಹುಮಾನ ಸಿಗಲಿದೆ.

3 / 5

ಇದರ ಜೊತೆಗೆ ಐಸಿಸಿ, ಗುಂಪು ಹಂತ ಮತ್ತು ಸೂಪರ್ 8 ಪಂದ್ಯಗಳನ್ನು ಗೆದ್ದ ತಂಡಗಳಿಗೂ ಪ್ರತ್ಯೇಕವಾಗಿ ಬಹುಮಾನವನ್ನು ನೀಡುತ್ತದೆ. ಗೆದ್ದ ಪ್ರತಿ ಪಂದ್ಯಕ್ಕೂ (ಸೆಮಿಫೈನಲ್ ಮತ್ತು ಫೈನಲ್ ಹೊರತುಪಡಿಸಿ), ತಂಡವು ಸರಿಸುಮಾರು 2.8 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ. ಪಾಕಿಸ್ತಾನ ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಮತ್ತು ಸೂಪರ್ 8 ರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ, ಒಟ್ಟು ನಾಲ್ಕು ಗೆಲುವುಗಳಿಗೆ, ತಂಡವು ಸರಿಸುಮಾರು 11.2 ಕೋಟಿ ರೂಗಳನ್ನು ಪಡೆಯುತ್ತದೆ.

4 / 5

ಪಾಕಿಸ್ತಾನ ತಂಡವು ನೆದರ್ಲೆಂಡ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಆರಂಭಿಸಿತು. ನಂತರ ಅಮೆರಿಕ ತಂಡವನ್ನು 32 ರನ್‌ಗಳಿಂದ ಮಣಿಸಿತ್ತು. ಆದರೆ ಭಾರತದ ವಿರುದ್ಧ 61 ರನ್‌ಗಳಿಂದ ಸೋತಿದ್ದ ಪಾಕಿಸ್ತಾನ ತಂಡವು ತನ್ನ ಅಂತಿಮ ಗುಂಪು ಪಂದ್ಯವನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಆದಾಗ್ಯೂ, ಸೂಪರ್ 8 ಸುತ್ತಿನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ.

5 / 5

ನ್ಯೂಜಿಲೆಂಡ್ ವಿರುದ್ಧದ ಮೊದಲ ಸೂಪರ್8 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ನಂತರ ನಡೆದಿದ್ದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2 ವಿಕೆಟ್‌ಗಳ ಸೋಲು ಕಂಡಿತ್ತು. ಇದು ಪಾಕ್ ತಂಡದ ಸೆಮಿಫೈನಲ್ ಆಸೆಗೆ ದೊಡ್ಡ ಹೊಡೆತ ನೀಡಿತ್ತು ಆದಾಗ್ಯೂ ಕೊನೆಯ ಅವಕಾಶವೆಂಬಂತೆ ಪಾಕ್ ತಂಡಕ್ಕೆ ಶ್ರೀಲಂಕಾ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸಿದರೆ, ಸೆಮೀಸ್​ಗೇರುವ ಅವಕಾಶವಿತ್ತು. ಆದರೆ ಆ ರೀತಿ ಮಾಡುವಲ್ಲಿ ಪಾಕ್ ವಿಫಲವಾಯಿತು.

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us