AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಇತಿಹಾಸದಲ್ಲೇ ಯಾರೂ ಮಾಡದ ವಿಶ್ವ ದಾಖಲೆ ಬರೆದ ರಸೆಲ್

Andre Russell World Recod: ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಗುಡ್ ಬೈ ಹೇಳಿರುವ ಆ್ಯಂಡ್ರೆ ರಸೆಲ್ ಇದೀಗ ಯುಎಇನಲ್ಲಿ ನಡೆಯುತ್ತಿರುವ ಇಂಟರ್​​ನ್ಯಾಷನಲ್ ಟಿ20 ಲೀಗ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ಅಬುಧಾಬಿ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ರಸೆಲ್ ಇದೀಗ ವಿಶೇಷ ವಿಶ್ವ ದಾಖಲೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 07, 2025 | 8:23 AM

Share
ಟಿ20 ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ಆಲ್​​ರೌಂಡರ್ ಆ್ಯಂಡ್ರೆ ರಸೆಲ್ (Andre Russell) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈವರೆಗೆ ಯಾರಿಂದಲೂ ಸಾಧ್ಯವಾಗದ ವರ್ಲ್ಡ್​ ರೆಕಾರ್ಡ್ ಎಂಬುದು ವಿಶೇಷ. ಅಂದರೆ ಚುಟುಕು ಕ್ರಿಕೆಟ್​​ನಲ್ಲಿ ರಸೆಲ್ ಮೂರು ವಿಭಾಗಗಳಲ್ಲಿ ವಿಶೇಷ ಮೈಲುಗಲ್ಲು ದಾಟಿದ್ದಾರೆ.

1 / 5
ಶಾರ್ಜಾದಲ್ಲಿ ನಡೆಯುತ್ತಿರುವ ಇಂಟರ್​​ನ್ಯಾಷನಲ್ ಟಿ20 ಲೀಗ್​​ನಲ್ಲಿ ಅಬುಧಾಬಿ ಪರ ಕಣಕ್ಕಿಳಿಯುತ್ತಿರುವ ರಸೆಲ್ ಡೆಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್​​​ಗಳನ್ನು ಎಸೆದಿದ್ದರು. ಈ ವೇಳೆ 1 ವಿಕೆಟ್ ಕಬಳಿಸಿದ್ದಾರೆ. ಈ ಒಂದು ವಿಕೆಟ್​​ನೊಂದಿಗೆ ಆ್ಯಂಡ್ರೆ ರಸೆಲ್ ಟಿ20 ಕ್ರಿಕೆಟ್​​ನಲ್ಲಿ 500 ವಿಕೆಟ್​​ಗಳ ಸಾಧನೆ ಮಾಡಿದ್ದಾರೆ.

2 / 5
ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲೇ 500+ ವಿಕೆಟ್, 5000+ ರನ್​ ಹಾಗೂ 500+ ಸಿಕ್ಸ್​​ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಅಂದರೆ ರಸೆಲ್ ಅವರನ್ನು ಹೊರತುಪಡಿಸಿ ಟಿ20 ಕ್ರಿಕೆಟ್​​ನಲ್ಲಿ ಯಾರಿಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

3 / 5
20 ಓವರ್‌ಗಳ ಕ್ರಿಕೆಟ್‌ನಲ್ಲಿ ಒಟ್ಟು 126 ಆಟಗಾರರು 5000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇನ್ನು 6 ಬೌಲರ್‌ಗಳು 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 10 ಬ್ಯಾಟ್ಸ್‌ಮನ್‌ಗಳು 500 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ಮೂರು ಪಟ್ಟಿಗಳಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ರಸೆಲ್.

4 / 5
ಟಿ20 ಕ್ರಿಕೆಟ್​​ನಲ್ಲಿ ಈವರೆಗೆ 576 ಪಂದ್ಯಗಳನ್ನಾಡಿರುವ ಆ್ಯಂಡ್ರೆ ರಸೆಲ್ ಒಟ್ಟು 9496 ರನ್ ಕಲೆಹಾಕಿದ್ದಾರೆ. ಅಲ್ಲದೆ ಬರೋಬ್ಬರಿ 500 ವಿಕೆಟ್​​ಗಳನ್ನು ಸಹ ಪಡೆದಿದ್ದಾರೆ. ಇನ್ನು 772 ಸಿಕ್ಸರ್​​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​​ನಲ್ಲಿ ಯಾರಿಗೂ ಸಾಧ್ಯವಾಗದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

5 / 5