- Kannada News Photo gallery Cricket photos Are Yuzvendra Chahal And Dhanashree Verma Expecting Their First Child
ತಂದೆಯಾಗ್ತಿದ್ದಾರಾ ಯುಜ್ವೇಂದ್ರ ಚಹಲ್: ಕುತೂಹಲ ಮೂಡಿಸಿದ ಧನಶ್ರೀ ಪೋಸ್ಟ್
Yuzvendra Chahal - Dhanashree Verma: ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕೆಲ ದಿನಗಳ ಹಿಂದೆ ಧನಶ್ರೀ ವರ್ಮಾ ಧರಿಸಿದ ಉಡುಪು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ವಿಶೇಷ ಇದೆಯಾ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
Updated on: May 29, 2024 | 1:57 PM

ಟೀಮ್ ಇಂಡಿಯಾ (Team India) ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಇಂತಹದೊಂದು ಕುತೂಹಲಕ್ಕೆ ಕಾರಣವಾಗಿದ್ದು ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು. ಈ ಫೋಟೋಗಳು ಚಹಲ್-ಧನಶ್ರೀ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಆದರೆ ಈ ಫೋಟೋದಲ್ಲಿ ಧನಶ್ರೀ ಕಾಣಿಸಿಕೊಂಡಿರುವುದು ಗರ್ಭವತಿಯರು ಧರಿಸುವ ಉಡುಗೆಯಲ್ಲಿ. ಈ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಲ್ ತಂದೆಯಾಗುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದಾಗ್ಯೂ ಚಹಲ್ ಆಗಲಿ ಅಥವಾ ಧನಶ್ರೀ ವರ್ಮಾ ಆಗಲಿ ಈ ಬಗ್ಗೆ ಯಾವುದೇ ಸಿಹಿ ಸುದ್ದಿಯನ್ನು ಹಂಚಿಕೊಂಡಿಲ್ಲ. ಆದರೆ ಒಂದು ಉಡುಗೆಯಿಂದಲೇ ಇದೀಗ ಚಹಲ್ ದಂಪತಿ ಪೋಷಕರಾಗಲಿದ್ದಾರೆ ಎಂಬ ಸುದ್ದಿಯಂತು ಹರಿದಾಡಲಾರಂಭಿಸಿದೆ.

2020 ರಲ್ಲಿ ಯುಜ್ವೇಂದ್ರ ಚಹಲ್, ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇವರ ದಾಂಪತ್ಯ ಜೀವನಕ್ಕೆ 4 ವರ್ಷಗಳು ತುಂಬಿದ್ದು, ಇದರ ಬೆನ್ನಲ್ಲೇ ಚಹಲ್ ಕಡೆಯಿಂದ ಸಿಹಿ ಸುದ್ದಿಯೊಂದನ್ನು ಕುಟುಂಬಸ್ಥರು ನಿರೀಕ್ಷಿಸುತ್ತಿದ್ದಾರೆ. ಈ ನಿರೀಕ್ಷೆಗಳ ನಡುವೆ ಇದೀಗ ಧನಶ್ರೀ ವರ್ಮಾ ಉಡುಗೆಯೊಂದಿಗೆ ಸುಳಿವು ನೀಡಿದ್ರಾ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಸದ್ಯ ಸದ್ಯ ಯುಜ್ವೇಂದ್ರ ಚಹಲ್ ಟಿ20 ವಿಶ್ವಕಪ್ಗಾಗಿ ಅಮೆರಿಕಗೆ ತೆರಳಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾದ 15 ಸದಸ್ಯರ ಬಳಗದಲ್ಲಿ ಚಹಲ್ ಪ್ರಮುಖ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಜೂನ್ 5 ರಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಚಹಲ್ ಕೂಡ ಕಣಕ್ಕಿಳಿಯಬಹುದು.




