ಐಪಿಎಲ್ 2025 ರ ಮೆಗಾ ಹರಾಜು ಆರಂಭವಾಗಿದೆ. ಮಾರ್ಕ್ಯೂ ಆಟಗಾರರ ಮೊದಲ ಸೆಟ್ನಲ್ಲಿ ಮೊದಲ ಆಟಗಾರನಾಗಿ ಹರಾಜಿಗೆ ಬಂದಿದ್ದ ಟೀಂ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಮತ್ತೆ ಪಂಜಾಬ್ ತಂಡವನ್ನೇ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಷದೀಪ್ಗಾಗಿ ಹಲವು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯಿತು. ಮೊದಲು ಸಿಎಸ್ಕೆ ಖರೀದಿಗೆ ಮುಂದಾಯಿತು. ಆ ಬಳಿಕ ಗುಜರಾತ್ ಟೈಟಾನ್ಸ್ ಕೂಡ ಅಖಾಡಕ್ಕಿಳಿಯಿತು. ಆರ್ಸಿಬಿ ಕೂಡ ಅರ್ಷದೀಪ್ಗೆ 10 ಕೋಟಿ ರೂ. ನೀಡಲು ಮುಂದಾಯಿತು.
ಆ ನಂತರ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಪೈಪೋಟಿ ನಡೆಯಿತು. ಇಲ್ಲಿ ಅಖಾಡಕ್ಕಿಳಿದ ಸನ್ರೈಸರ್ಸ್ ಹೈದರಾಬಾದ್ 15.75 ಕೋಟಿ ರೂ. ಬಿಡ್ ಮಾಡಿತು. ಅಂತಿಮವಾಗಿ ಹೈದರಾಬಾದ್ 18 ಕೋಟಿ ನೀಡಲು ಮುಂದಾಯಿತು. ಆದರೆ ಇಲ್ಲಿ ಪಂಜಾಬ್ ಕಿಂಗ್ಸ್ ಆರ್ಟಿಎಮ್ ಆಯ್ಕೆ ಇದ್ದ ಕಾರಣ ಅರ್ಷದೀಪ್ರನ್ನು 18 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಂಡಿತು.
ಪ್ರಸ್ತುತ ಟೀಂ ಇಂಡಿಯಾದ ಟಿ20 ಬ್ರಿಗೇಡ್ನ ಪ್ರಮುಖ ಆಟಗಾರನಾಗಿರುವ ಅರ್ಷದೀಪ್ ಟಿ20 ಕ್ರಿಕೆಟ್ನಲ್ಲಿ ಭರ್ಜರಿ ವಿಕೆಟ್ಗಳನ್ನು ಕಬಳಿಸಿದ್ದಾರೆ. ಆಡಿರುವ 60 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 95 ವಿಕೆಟ್ ಪಡೆದಿದ್ದಾರೆ. ಅರ್ಷದೀಪ್ ಸಿಂಗ್ ಅವರ ವಿಶೇಷವೆಂದರೆ ಅವರು ಪವರ್ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ವಿಕೆಟ್ ಪಡೆಯುವ ಶಕ್ತಿ ಹೊಂದಿದ್ದಾರೆ.
2019 ರಲ್ಲಿ ಪಂಜಾಬ್ ಕಿಂಗ್ಸ್ಗೆ ಪಾದಾರ್ಪಣೆ ಮಾಡಿದ ಅರ್ಷದೀಪ್ ಸಿಂಗ್, 2024 ರವರೆಗೆ ಪಂಜಾಬ್ ಪರ 65 ಪಂದ್ಯಗಳನ್ನು ಆಡಿದ್ದು, 76 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವೇಳೆ ಅವರು ಒಂದು ಪಂದ್ಯದಲ್ಲಿ ಐದು ಮತ್ತು ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.