- Kannada News Photo gallery Cricket photos Ashes 2021 David Warner misses Century in Adelaide Test, 2nd innings in a row
Ashes 2021: ಶತಕ ವಂಚಿತ ವಾರ್ನರ್; 100 ವರ್ಷಗಳ ಹಳೆಯ ದಾಖಲೆ ಪುನರಾವರ್ತಿಸಿದ ಕಾಂಗರೂ ಬ್ಯಾಟರ್!
Ashes 2021: ವಾರ್ನರ್ 100 ವರ್ಷಗಳ ಹಳೆಯ ಆಶಸ್ ದಾಖಲೆಯನ್ನು ಪುನರಾವರ್ತಿಸಿದ್ದಾರೆ. ಆಶಸ್ ಸರಣಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ 90-99ರ ನಡುವೆ ಔಟಾಗಿರುವುದು ಕಳೆದ 100 ವರ್ಷಗಳಲ್ಲಿ ಇದೇ ಮೊದಲು.
Updated on: Dec 16, 2021 | 7:51 PM

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯವು ಗುರುವಾರ, ಡಿಸೆಂಬರ್ 16 ರಂದು ಅಡಿಲೇಡ್‌ನಲ್ಲಿ ಪ್ರಾರಂಭವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ದಿನವೇ ಇಂಗ್ಲೆಂಡ್ ಬೌಲರ್‌ಗಳನ್ನು ಸರಿಯಾಗಿ ಬೆಂಡೆತ್ತಿದೆ. ಬ್ರಿಸ್ಬೇನ್ ಟೆಸ್ಟ್‌ನ ಮೊದಲ ಇನಿಂಗ್ಸ್ನಲ್ಲಂತೂ ಮತ್ತೊಮ್ಮೆ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬ್ಯಾಟ್ ಮೂಲಕ ಅಬ್ಬರಿಸಿದರೂ ಬ್ರಿಸ್ಬೇನ್ನಂತೆ ಮತ್ತೊಮ್ಮೆ ಶತಕ ವಂಚಿತರಾದರು.

ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ 35 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ ವಾರ್ನರ್, ಎರಡನೇ ಮತ್ತು ಮೂರನೇ ಸೆಷನ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಮೂರನೇ ಅವಧಿಯಲ್ಲಿ, ಅವರು ಶತಕದತ್ತ ಸಾಗುತ್ತಿದ್ದರು, ಆದರೆ 95 ರನ್ ಗಳಿಸಿದ್ದಾಗ, ಅವರು ಬೆನ್ ಸ್ಟೋಕ್ಸ್ ಎಸೆತದಲ್ಲಿ ಔಟಾದರು. ಈ ಮೂಲಕ ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾದರು. ಬ್ರಿಸ್ಬೇನ್ ಟೆಸ್ಟ್‌ನಲ್ಲೂ ಅವರು 94 ರನ್ ಗಳಿಸಿ ಔಟಾದರು.

ಅವರ ಟೆಸ್ಟ್ ವೃತ್ತಿಜೀವನದಲ್ಲಿ, ವಾರ್ನರ್ 90 ಮತ್ತು 99 ರ ನಡುವೆ ಕೇವಲ ಮೂರನೇ ಬಾರಿಗೆ ಔಟಾಗಿದ್ದಾರೆ. ವಿಶೇಷವೆಂದರೆ ಟೆಸ್ಟ್ ವೃತ್ತಿಜೀವನದ 159 ಇನ್ನಿಂಗ್ಸ್‌ಗಳಲ್ಲಿ, ಅವರು ಕೇವಲ ಒಂದು ಬಾರಿ 90 ರ ಗಡಿ ದಾಟಿದ ನಂತರ ಔಟಾಗಿದ್ದಾರೆ.

ಇದಷ್ಟೇ ಅಲ್ಲ, ವಾರ್ನರ್ 100 ವರ್ಷಗಳ ಹಳೆಯ ಆಶಸ್ ದಾಖಲೆಯನ್ನು ಪುನರಾವರ್ತಿಸಿದ್ದಾರೆ. ಆಶಸ್ ಸರಣಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ 90-99ರ ನಡುವೆ ಔಟಾಗಿರುವುದು ಕಳೆದ 100 ವರ್ಷಗಳಲ್ಲಿ ಇದೇ ಮೊದಲು. ಇದಕ್ಕೂ ಮುನ್ನ 1921ರಲ್ಲಿ ಆಸ್ಟ್ರೇಲಿಯಾದ ಟಾಮಿ ಆಂಡ್ರ್ಯೂಸ್ ಸತತ ಎರಡು ಬಾರಿ ಔಟಾಗಿದ್ದರು.




