AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್..! ವಿಶೇಷ ದಾಖಲೆ ಬರೆದ ಜೇಮ್ಸ್ ಆಂಡರ್ಸನ್

James Anderson: 2002ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಕಾಲಿರಿಸಿದ ಆಂಡರ್ಸನ್ ಇದುವರೆಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ 1100 ವಿಕೆಟ್ ಪಡೆದಿದ್ದಾರೆ.

ಪೃಥ್ವಿಶಂಕರ
|

Updated on: Jun 19, 2023 | 7:31 AM

Share
ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 393 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾ 386 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್, ಅಲೆಕ್ಸ್ ಕ್ಯಾರಿ ವಿಕೆಟ್ ಪಡೆಯುವ ಮೂಲಕ  ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

1 / 8
66 ರನ್ ಸಿಡಿಸಿ ಆಡುತ್ತಿದ್ದ ಅಲೆಕ್ಸ್ ಕ್ಯಾರಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಆಂಡರ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್‌ಗಳನ್ನು ಪೂರೈಸಿದರು. ಇಂಗ್ಲೆಂಡ್ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ 686 ವಿಕೆಟ್ ಪಡೆದಿರುವ ಆಂಡರ್ಸನ್​ಗೆ ಈ ಸರಣಿಯಲ್ಲಿ 700 ವಿಕೆಟ್‌ಗಳನ್ನು ಪೂರೈಸುವ ಅವಕಾಶವೂ ಇದೆ.

2 / 8
2002ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಕಾಲಿರಿಸಿದ ಆಂಡರ್ಸನ್ ಇದುವರೆಗೆ 289 ಪ್ರಥಮ ದರ್ಜೆ ಪಂದ್ಯಗಳಲ್ಲಿ 1100 ವಿಕೆಟ್ ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 19 ರನ್‌ ನೀಡಿ 7 ವಿಕೆಟ್‌ ಪಡೆದಿರುವುದು ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಆಂಡರ್ಸನ್ 54 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅಲ್ಲದೆ 6 ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ.

3 / 8
ಇನ್ನು ಆಂಡರ್ಸನ್ ಅವರ ಟೆಸ್ಟ್ ಕೆರಿಯರ್ ನೋಡುವುದಾದರೆ.. ಟೆಸ್ಟ್ ಕ್ರಿಕೆಟ್​ನಲ್ಲಿ 334 ಇನ್ನಿಂಗ್ಸ್‌ಗಳನ್ನಾಡಿರುವ ಈ ಇಂಗ್ಲೆಂಡ್ ವೇಗಿ 686 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಆಶಸ್ ಸರಣಿ ಆಡುತ್ತಿರುವ ಜೇಮಿ ಇನ್ನು 14 ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್​ನಲ್ಲಿ 700 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ಬರೆಯಲ್ಲಿದ್ದಾರೆ.

4 / 8
ಹಾಗೆಯೇ ಇಂಗ್ಲೆಂಡ್ ಪರ 194 ಏಕದಿನ ಪಂದ್ಯಗಳನ್ನಾಡಿರುವ ಆಂಡರ್ಸನ್ 269 ವಿಕೆಟ್ ಪಡೆದಿದ್ದಾರೆ. 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದು, ಲಿಸ್ಟ್‌ ಎ ಪಂದ್ಯಗಳಲ್ಲಿ ಆಡಿರುವ 261 ಪಂದ್ಯಗಳಲ್ಲಿ 358 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5 / 8
ಟೆಸ್ಟ್ ಕ್ರಿಕೆಟ್​ನಲ್ಲಿ 686 ವಿಕೆಟ್ ಪಡೆದಿರುವ ಆಂಡರ್ಸನ್, ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ನಂತರ ಮೂರನೇ ಸ್ಥಾನದಲ್ಲಿದ್ದಾರೆ.

6 / 8
ಇಂಗ್ಲೆಂಡ್‌ನ ವಿಲ್ಫ್ರೆಡ್ ರೋಡ್ಸ್ ಅವರು 1,110 ಪಂದ್ಯಗಳಲ್ಲಿ 4,204 ವಿಕೆಟ್‌ಗಳೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. 592 ಪಂದ್ಯಗಳಲ್ಲಿ 3,776 ವಿಕೆಟ್‌ ಕಬಳಿಸಿರುವ ಇಂಗ್ಲೆಂಡ್‌ನ ಮತ್ತೊಬ್ಬ ವೇಗಿ ಟಿಚ್ ಫ್ರೀಮನ್ ಎರಡನೇ ಸ್ಥಾನದಲ್ಲಿದ್ದರೆ, 635 ಪಂದ್ಯಗಳಲ್ಲಿ 3,278 ವಿಕೆಟ್‌ ಪಡೆದಿರುವ ಚಾರ್ಲಿ ಪಾರ್ಕರ್ ನಂತರದ ಸ್ಥಾನದಲ್ಲಿದ್ದಾರೆ.

7 / 8
ಇನ್ನು ನಡೆಯುತ್ತಿರುವ ಆಶಸ್ ಸರಣಿಯ ಬಗ್ಗೆ ಹೇಳಬೇಕೆಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 393 ರನ್ ಗಳಿಸಿತ್ತು. ಆಸ್ಟ್ರೇಲಿಯಾ 386 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಇದೀಗ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ತಂಡದ ಪರ ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಭರ್ಜರಿ ಶತಕ ಬಾರಿಸಿದ್ದರೆ, ಅದೇ ಸಮಯದಲ್ಲಿ ಜಾಕ್ ಕ್ರೌಲಿ 61 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ 141 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.

8 / 8