Asia Cup 2023: ರಾಹುಲ್ ಜೊತೆಗೆ ಮತ್ತೊಬ್ಬ ಸ್ಟಾರ್ ಬ್ಯಾಟರ್ ಏಷ್ಯಾಕಪ್ ಆಡುವುದು ಅನುಮಾನ..!

Updated on: Jun 26, 2023 | 7:54 AM

Shreyas Iyer Injury Update: ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ರಾಹುಲ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಏಷ್ಯಾಕಪ್​ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

1 / 7
ಏಷ್ಯಾಕಪ್ ಹಾಗೂ ವಿಶ್ವಕಪ್ ಹತ್ತಿರವಾಗುತ್ತಿರುವಂತೆಯೇ ಟೀಂ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರಮುಖ ಆಟಗಾರರ ಇಂಜುರಿಯಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೋತಿದ್ದ ಭಾರತಕ್ಕೆ ಅದೇ ಇಂಜುರಿ ಸಮಸ್ಯೆ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲೂ ಕಾಡುವ ಆತಂಕ ಎದುರಾಗಿದೆ.

ಏಷ್ಯಾಕಪ್ ಹಾಗೂ ವಿಶ್ವಕಪ್ ಹತ್ತಿರವಾಗುತ್ತಿರುವಂತೆಯೇ ಟೀಂ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಪ್ರಮುಖ ಆಟಗಾರರ ಇಂಜುರಿಯಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೋತಿದ್ದ ಭಾರತಕ್ಕೆ ಅದೇ ಇಂಜುರಿ ಸಮಸ್ಯೆ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲೂ ಕಾಡುವ ಆತಂಕ ಎದುರಾಗಿದೆ.

2 / 7

ವಾಸ್ತವವಾಗಿ ಟೀಂ ಇಂಡಿಯಾದ ಪ್ರಮುಖ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಇಂಜುರಿ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇಂಜುರಿ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಈ ಮೂವರು ಏಷ್ಯಾಕಪ್ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಇತ್ತು.

3 / 7

ಆದರೆ ಈ ಮೂವರಲ್ಲಿ ಇಬ್ಬರು ಬ್ಯಾಟರ್​ಗಳು ತಂಡಕ್ಕೆ ಮರಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಏಷ್ಯಾಕಪ್ ವೇಳೆಗೆ ಪೂರ್ಣ ಫಿಟ್ ಆಗುವುದು ಅನುಮಾನ ಎಂದು ವರದಿಯಾಗಿತ್ತು.

4 / 7

ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ರಾಹುಲ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಏಷ್ಯಾಕಪ್​ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ವಾಸ್ತವವಾಗಿ, ಈ ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬೆನ್ನಿನ ನೋವಿಗೆ ತುತ್ತಾಗಿದ್ದ ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಾಯದಿಂದಾಗಿ, ಅಯ್ಯರ್‌ಗೆ ಐಪಿಎಲ್ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲಾಗಲಿಲ್ಲ.

5 / 7

ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್​ನಲ್ಲಿದ್ದಾರೆ. ಆದರೆ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಅಯ್ಯರ್​ಗೆ ಇನ್ನೂ ಬೆನ್ನು ನೋವಿನ ಸಮಸ್ಯೆ ಇದ್ದು, ಇತ್ತೀಚೆಗೆ ಎನ್‌ಸಿಎಯಲ್ಲಿ ತಮ್ಮ ಬೆನ್ನುನೋವಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ.

6 / 7

ಗಾಯದ ಸಮಸ್ಯೆಯಿಂದಾಗಿ ಅಯ್ಯರ್ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಅಯ್ಯರ್ ಸಂಪೂರ್ಣ ಫಿಟ್ ಆಗಲು 3 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಒಂದು ವೇಳೆ ಅಯ್ಯರ್ ಚೇತರಿಕೆ ತಡವಾದರೆ, ಅವರು ಏಷ್ಯಾಕಪ್ ಆಡುವುದು ಮಾತ್ರವಲ್ಲದೆ ವಿಶ್ವಕಪ್ ಆಡಲೂ ಕಷ್ಟವಾಗುತ್ತಿದೆ. ಏಷ್ಯಾಕಪ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದ್ದು, ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ.

7 / 7

ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ಐಸಿಸಿ ಟ್ರೊಫಿಯ ಬರವನ್ನು ನೀಗಿಸಿಕೊಳ್ಳಲು ಟೀಂ ಇಂಡಿಯಾಕ್ಕೆ ಇದು ಉತ್ತಮ ಅವಕಾಶವಾಗಿದೆ. ಅಲ್ಲದೆ ವಿಶ್ವಕಪ್ ದೃಷ್ಟಿಯಿಂದ ಅದಕ್ಕೂ ಮುನ್ನ ನಡೆಯುವ ಏಷ್ಯಾಕಪ್ ಭಾರತಕ್ಕೆ ಬಹಳ ಮುಖ್ಯವಾಗಿದೆ. ಹೀಗಾಗಿ ಈ ಎರಡು ಪ್ರಮುಖ ಈವೆಂಟ್​ಗಳಿಗೆ ಪ್ರಮುಖ ಆಟಗಾರರ ಅಲಭ್ಯತೆ ಟೀಂ ಇಂಡಿಯಾದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ.

Loading...
Unable to load recommendations.
Follow Us