AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ರೋಹಿತ್ ಶರ್ಮಾಗೆ ಗೇಟ್​ ಪಾಸ್ ಖಚಿತ: ಇವರಂತೆ ಮುಂದಿನ ಕ್ಯಾಪ್ಟನ್..!

Team India: ಹಾರ್ದಿಕ್ ಪಾಂಡ್ಯ ಅವರ ಫಿಟ್​ನೆಸ್​ ಅನ್ನು ಗಮನಿಸಿದರೆ, ಅವರು ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಆದರೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪಾಂಡ್ಯ ಯಶಸ್ವಿಯಾಗಿ ಮುನ್ನಡೆಸಿದ್ದರು.

TV9 Web
| Updated By: ಝಾಹಿರ್ ಯೂಸುಫ್|

Updated on: Jun 25, 2023 | 11:18 PM

Share
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿನ ಸೋಲಿನ ಬೆನ್ನಲ್ಲೇ ಶುರುವಾದ ಭಾರತ ತಂಡದ ನಾಯಕತ್ವದ ಚರ್ಚೆಯು ಇನ್ನೂ ಕೂಡ ಮುಂದುವರೆದಿದೆ. ಈ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವುದು ಏಕದಿನ ವಿಶ್ವಕಪ್​ ಬಳಿಕ. ಇದನ್ನು ಪುಷ್ಠೀಕರಿಸುವಂತಹ ಹೇಳಿಕೆ ನೀಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ.

1 / 6
ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದ ನಾಯಕರಾಗಿರುವ ರೋಹಿತ್ ಶರ್ಮಾ ಇದುವರೆಗೆ ಯಾವುದೇ ಟೂರ್ನಿ ಗೆದ್ದಿಲ್ಲ. ಹಿಟ್​ಮ್ಯಾನ್ ನಾಯಕತ್ವದಲ್ಲಿ ಭಾರತ ತಂಡವು ಏಷ್ಯಾಕಪ್, ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮುಗ್ಗರಿಸಿದೆ.

2 / 6
ಹೀಗಾಗಿಯೇ ಏಕದಿನ ವಿಶ್ವಕಪ್ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಟೂರ್ನಿ. 2023ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ನಾಯಕ ಬದಲಾಗುವುದು ಖಚಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಭಾರತ ತಂಡವನ್ನು ಮುಂಬರುವ ದಿನಗಳಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.

3 / 6
ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ, ಏಕದಿನ ವಿಶ್ವಕಪ್​ ಬಳಿಕ ಭಾರತ ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯಗೆ ನೀಡಬೇಕೆಂಬುದು ನನ್ನ ಅಭಿಪ್ರಾಯ. 2022ರ ಟಿ-20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕರಾಗಿದ್ದಾರೆ. ಹೀಗಾಗಿ ವಿಶ್ವಕಪ್ ಏಕದಿನ ತಂಡದ ನಾಯಕತ್ವ ಕೂಡ ಅವರಿಗೆ ಒಲಿಯಲಿದೆ ಎಂದಿದ್ದಾರೆ.

4 / 6
ಪ್ರಸ್ತುತ ಹಾರ್ದಿಕ್ ಪಾಂಡ್ಯ ಅವರ ಫಿಟ್​ನೆಸ್​ ಅನ್ನು ಗಮನಿಸಿದರೆ, ಅವರು ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಆದರೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪಾಂಡ್ಯ ಯಶಸ್ವಿಯಾಗಿ ಮುನ್ನಡೆಸಿದ್ದರು. 2022 ರಲ್ಲಿ ಚಾಂಪಿಯನ್ ಆದರೆ, 2023 ರಲ್ಲಿ ತಂಡವನ್ನು ರನ್ನರ್ ಅಪ್ ಮಾಡಿದ್ದರು.

5 / 6
ಹೀಗಾಗಿ ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಏಕದಿನ ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ಭಾರತ ತಂಡದ ನಾಯಕತ್ವ ಸಿಗಲಿದೆ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

6 / 6