207 ರನ್ಗಳ ಕಠಿಣ ಗುರಿ ಪಡೆದ ದಿಂಡಿಗಲ್ ಡ್ರಾಗನ್ಸ್ ಶಿವಂ ಸಿಂಗ್ 42 ಎಸೆತಗಳಲ್ಲಿ 61 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲರಾದರು. ಪರಿಣಾಮ ದಿಂಡಿಗಲ್ ಡ್ರಾಗನ್ಸ್ ತಂಡವು 19.1 ಓವರ್ಗಳಲ್ಲಿ 147 ರನ್ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ 59 ರನ್ಗಳ ಜಯ ಸಾಧಿಸಿತು.