ಮಳೆ ಬಂದರೂ ನೋ ಟೆನ್ಶನ್… ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ

Australia: ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಈ ಬಾರಿ ನಿರ್ಮಿಸಲಿರುವ ಸ್ಟೇಡಿಯಂಗೆ ಮೇಲ್ಛಾವಣಿ ಇರಲಿರುವುದು ವಿಶೇಷ. ಅಂದರೆ ಈ ಹಿಂದಿನ ಮೆಲ್ಬೋರ್ನ್​ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂ ಗಿಂತ ವಿಭಿನ್ನವಾಗಿ ಆಲ್​ ವೆದರ್ ಸ್ಟೇಡಿಯಂ ನಿರ್ಮಿಸಲು ಸರ್ಕಾರ ಮುಂದಾಗಿರುವುದು ವಿಶೇಷ.

ಝಾಹಿರ್ ಯೂಸುಫ್
|

Updated on:Jul 09, 2024 | 1:55 PM

ವಿಶ್ವದ ಮೊದಲ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ಸ್ಟೇಡಿಯಂನ ಬಹುಮುಖ್ಯ ವಿಶೇಷತೆ ಎಂದರೆ ಮೇಲ್ಛಾವಣಿ. ಅಂದರೆ ಮಳೆ ಬಂದರೂ ಪಂದ್ಯಗಳನ್ನು ಆಯೋಜಿಸಲು ಅನುಕೂಲವಾಗುವಂತಹ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಆಸ್ಟ್ರೇಲಿಯಾ ಕೈ ಹಾಕಿದೆ.

1 / 5
ಈ ಹಿಂದೆ ಆಸ್ಟ್ರೇಲಿಯಾ ಸರ್ಕಾರ ಮೆಲ್ಬೋರ್ನ್​ನಲ್ಲಿ ಮಾರ್ವೆಲ್ ಸ್ಟೇಡಿಯಂ ನಿರ್ಮಿಸಿತ್ತು. ಈ ಸ್ಟೇಡಿಯಂಗೂ ಮೇಲ್ಛಾವಣಿ ಇದೆ. ಆದರೆ ಈ ರೂಫಿಂಗ್​ ಸ್ಟೇಡಿಯಂ ಅನ್ನು ಪಂದ್ಯಗಳಿಗಾಗಿ ನಿರ್ಮಿಸಲಾಗಿಲ್ಲ. ಅಲ್ಲದೆ ಇಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಅನೇಕ ಬಾರಿ ಚೆಂಡು ಮೇಲ್ಛಾವಣಿಗೆ ಬಡಿದಿದೆ. ಇದೀಗ ಈ ಮೈದಾನವನ್ನು ಇತರೆ ಕ್ರೀಡೆಗಳಿಗಾಗಿ ಬಳಸಲಾಗುತ್ತಿದೆ.

2 / 5
ಆದರೀಗ ಕ್ರಿಕೆಟ್​ ಪಂದ್ಯಗಳಿಗೆ ಅನುಕೂಲವಾಗುವಂತಹ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿರುವುದು ವಿಶೇಷ. ಈ ಸ್ಟೇಡಿಯಂನ ವಿನ್ಯಾಸಗಳು ಇದೀಗ ಹೊರಬಿದ್ದಿದ್ದು, ಇಲ್ಲಿ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗುತ್ತದೆ. ಇದರಿಂದ ಬೆಳಿಗ್ಗೆ ಕೂಡ ಪಂದ್ಯವನ್ನು ಆಯೋಜಿಸಬಹುದು. ಹಾಗೆಯೇ ಮಳೆಯ ನಡುವೆಯು ಪಂದ್ಯವು ಸರಾಗವಾಗಿ ನಡೆಯಲಿದೆ.

3 / 5
ಇನ್ನು ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದ್ದು, ಕ್ರಿಕೆಟ್ ಪಂದ್ಯಗಳು ಇಲ್ಲದ ಸಮಯದಲ್ಲಿ ಇತರೆ ಕ್ರೀಡೆಗಳಿಗೂ ಬಳಸುವಂತಹ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸದಾ ಕ್ರೀಡಾ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಯೋಜನೆ ರೂಪಿಸಿದೆ.

4 / 5
ಈ ಬಗ್ಗೆ ಮಾತನಾಡಿರುವ ಕಾಕ್ಸ್ ಆರ್ಕಿಟೆಕ್ಚರ್ ಸಿಇಒ ಅಲಿಸ್ಟೈರ್ ರಿಚರ್ಡ್‌ಸನ್ ಅವರು, ಈ  ಕ್ರೀಡಾಂಗಣದ ವಿನ್ಯಾಸವು ಎಲ್ಲಾ ಸಮಯದಲ್ಲೂ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ಮಾಡಲಾಗಿದೆ. ವಿಶೇಷವಾಗಿ ಇದರ ಮೇಲ್ಛಾವಣಿಯು ಅತೀ ಎತ್ತರದಲ್ಲಿರಲಿದೆ. ಈ ನೂತನ ಸ್ಟೇಡಿಯಂನ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಆರಂಭವಾಗಲಿದ್ದು, 2028ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದ್ದಾರೆ. (ALL PC: Dailymail)

5 / 5

Published On - 1:55 pm, Tue, 9 July 24

Follow us
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ

3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ