Gautam Gambhir: ಭಾರತ ತಂಡದ ಮುಖ್ಯ ಕೋಚ್ಗೆ ಹುದ್ದೆಗೆ ಬೇಕಾದ ಅನುಭವಗಳ ಅರ್ಹತೆಗಳಲ್ಲಿ, ಕನಿಷ್ಠ 2 ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ದೇಶದ ಮುಖ್ಯ ಕೋಚ್ ಆಗಿರಬೇಕು ಎಂದು ತಿಳಿಸಲಾಗಿದೆ. ಅಥವಾ 3 ವರ್ಷಗಳ ಕಾಲ ಯಾವುದೇ ಅಸೋಸಿಯೇಟ್ ಸದಸ್ಯ ತಂಡ/ಯಾವುದೇ ಐಪಿಎಲ್ ತಂಡ, ಪ್ರಥಮ ದರ್ಜೆ ತಂಡ, ಯಾವುದೇ ದೇಶದ A ತಂಡದ ತರಬೇತುದಾರರಾಗಿರಬೇಕು. ಅಥವಾ ಬಿಸಿಸಿಐನ ಲೆವೆಲ್-3 ಕೋಚಿಂಗ್ ಪ್ರಮಾಣಪತ್ರವನ್ನು ಹೊಂದಿರಬೇಕು. ಇಲ್ಲಿ ಐಪಿಎಲ್ ತಂಡದ ಮೆಂಟರ್ ಸ್ಥಾನದ ಅನುಭವದೊಂದಿಗೆ ಗಂಭೀರ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಇದೀಗ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.