AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹ ಆಟಗಾರನ ಮಾಜಿ ಗರ್ಲ್​ ಫ್ರೆಂಡ್​ನ ಮದುವೆಯಾದ ಆಸ್ಟ್ರೇಲಿಯಾ ಕ್ರಿಕೆಟಿಗ

Nathan Lyon-Emma McCarthy: ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಲಿಯಾನ್ ಚಿತ್ರಕ್ಕೆ 'ಮಿಸ್ಟರ್ ಅಂಡ್ ಮಿಸೆಸ್.' ಎನ್ನುವ ಶೀರ್ಷಿಕೆ ನೀಡಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್|

Updated on: Jul 25, 2022 | 12:06 PM

Share
ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 24 ಜುಲೈ 2022 ರಂದು ದೀರ್ಘಕಾಲದ ಗರ್ಲ್​ಫ್ರೆಂಡ್​ ಎಮ್ಮಾ ಮೆಕಾರ್ಥಿಯನ್ನು ವಿವಾಹವಾಗಿದ್ದಾರೆ. ಸರಳವಾಗಿ ನಡೆದಿದ್ದ ಈ ಸಮಾರಂಭದಲ್ಲಿ ದಂಪತಿಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

1 / 6
34 ವರ್ಷದ ನಾಥನ್ ಲಿಯಾನ್ ಅವರಿಗೆ ಇದು 2ನೇ ಎರಡನೇ ಮದುವೆ ಎಂಬುದು ವಿಶೇಷ. ಇದಕ್ಕೂ ಮುನ್ನ ಮೆಲ್ ವಾರಿಂಗ್ ಎಂಬವರನ್ನು ವಿವಾಹವಾಗಿದ್ದರು. ಅಲ್ಲದೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲ ವರ್ಷಗಳ ನಂತರ ಈ ಜೋಡಿಯು ದೂರವಾಗಿದ್ದರು.

2 / 6
ಇದಾದ ಬಳಿಕ 2017 ರಿಂದ ಲಿಯಾನ್ ಮಾಡೆಲ್/ರಿಯಲ್ ಎಸ್ಟೇಟ್ ಏಜೆಂಟ್​ ಎಮ್ಮಾ ಮೆಕರ್ಥಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಈ ಸ್ನೇಹವು ಇದೀಗ ವಿವಾಹಕ್ಕೆ ಬಂದು ನಿಂತಿದೆ. ಇದೀಗ ಪ್ರೇಯಸಿಯನ್ನೇ ವಿವಾಹವಾಗಿರುವ ಖುಷಿಯನ್ನು ಸೋಷಿಯಲ್ ಮೀಡಿಯಾದ ನಾಥನ್ ಲಿಯಾನ್ ಹಂಚಿಕೊಂಡಿದ್ದಾರೆ.

3 / 6
ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಲಿಯಾನ್ ಚಿತ್ರಕ್ಕೆ 'ಮಿಸ್ಟರ್ ಅಂಡ್ ಮಿಸೆಸ್.' ಎನ್ನುವ ಶೀರ್ಷಿಕೆ ನೀಡಿದ್ದಾರೆ. ಇನ್ನು ಈ ಸರಳ ವಿವಾಹ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಜೋಶ್ ಇಂಗ್ಲಿಸ್, ಶಾನ್ ಅಬ್ಬೋಟ್, ಪೀಟರ್ ಸಿಡ್ಲ್, ಅಲೆಕ್ಸ್ ಕ್ಯಾರಿ, ಕ್ರಿಸ್ ಗ್ರೀನ್, ಮಿಚೆಲ್ ಸ್ವೀಪ್ಸನ್ ಮತ್ತು ಮ್ಯಾಟ್ ರೆನ್ಶಾ ಕಾಣಿಸಿಕೊಂಡಿದ್ದರು.

4 / 6
ವಿಶೇಷ ಎಂದರೆ ಎಮ್ಮಾ ಮೆಕಾರ್ಥಿ ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಮಿಚೆಲ್ ಮಾರ್ಷ್ ಅವರ ಮಾಜಿ ಗರ್ಲ್​ ಫ್ರೆಂಡ್. ಮಾರ್ಷ್ ಜೊತೆಗಿನ ಬ್ರೇಕ್ ಅಪ್ ಬಳಿಕ ಎಮ್ಮಾ ನಾಥನ್ ಲಿಯಾನ್​ ಜೊತೆ ಡೇಟಿಂಗ್ ಆರಂಭಿಸಿದ್ದರು. ಇದೀಗ ಎಮ್ಮಾ ಜೊತೆ ನಾಥನ್ ಲಿಯಾನ್ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ.

5 / 6
ಪ್ರಸ್ತುತ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ನಾಥನ್ ಲಿಯಾನ್, ಇದುವರೆಗೆ 110 ಟೆಸ್ಟ್ ಪಂದ್ಯಗಳಲ್ಲಿ 438 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ 20 ಬಾರಿ ಐದು ವಿಕೆಟ್‌ಗಳು ಮತ್ತು ಮೂರು ಬಾರಿ 10 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಆಸೀಸ್​ ದಂತಕಥೆಗಳಾದ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ನಂತರ ಆಸ್ಟ್ರೇಲಿಯಾದ ಮೂರನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ

6 / 6