ಸಹ ಆಟಗಾರನ ಮಾಜಿ ಗರ್ಲ್ ಫ್ರೆಂಡ್ನ ಮದುವೆಯಾದ ಆಸ್ಟ್ರೇಲಿಯಾ ಕ್ರಿಕೆಟಿಗ
TV9kannada Web Team | Edited By: Zahir PY
Updated on: Jul 25, 2022 | 12:06 PM
Nathan Lyon-Emma McCarthy: ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಲಿಯಾನ್ ಚಿತ್ರಕ್ಕೆ 'ಮಿಸ್ಟರ್ ಅಂಡ್ ಮಿಸೆಸ್.' ಎನ್ನುವ ಶೀರ್ಷಿಕೆ ನೀಡಿದ್ದಾರೆ.
Jul 25, 2022 | 12:06 PM
ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 24 ಜುಲೈ 2022 ರಂದು ದೀರ್ಘಕಾಲದ ಗರ್ಲ್ಫ್ರೆಂಡ್ ಎಮ್ಮಾ ಮೆಕಾರ್ಥಿಯನ್ನು ವಿವಾಹವಾಗಿದ್ದಾರೆ. ಸರಳವಾಗಿ ನಡೆದಿದ್ದ ಈ ಸಮಾರಂಭದಲ್ಲಿ ದಂಪತಿಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
1 / 6
34 ವರ್ಷದ ನಾಥನ್ ಲಿಯಾನ್ ಅವರಿಗೆ ಇದು 2ನೇ ಎರಡನೇ ಮದುವೆ ಎಂಬುದು ವಿಶೇಷ. ಇದಕ್ಕೂ ಮುನ್ನ ಮೆಲ್ ವಾರಿಂಗ್ ಎಂಬವರನ್ನು ವಿವಾಹವಾಗಿದ್ದರು. ಅಲ್ಲದೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲ ವರ್ಷಗಳ ನಂತರ ಈ ಜೋಡಿಯು ದೂರವಾಗಿದ್ದರು.
2 / 6
ಇದಾದ ಬಳಿಕ 2017 ರಿಂದ ಲಿಯಾನ್ ಮಾಡೆಲ್/ರಿಯಲ್ ಎಸ್ಟೇಟ್ ಏಜೆಂಟ್ ಎಮ್ಮಾ ಮೆಕರ್ಥಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಈ ಸ್ನೇಹವು ಇದೀಗ ವಿವಾಹಕ್ಕೆ ಬಂದು ನಿಂತಿದೆ. ಇದೀಗ ಪ್ರೇಯಸಿಯನ್ನೇ ವಿವಾಹವಾಗಿರುವ ಖುಷಿಯನ್ನು ಸೋಷಿಯಲ್ ಮೀಡಿಯಾದ ನಾಥನ್ ಲಿಯಾನ್ ಹಂಚಿಕೊಂಡಿದ್ದಾರೆ.
3 / 6
ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಲಿಯಾನ್ ಚಿತ್ರಕ್ಕೆ 'ಮಿಸ್ಟರ್ ಅಂಡ್ ಮಿಸೆಸ್.' ಎನ್ನುವ ಶೀರ್ಷಿಕೆ ನೀಡಿದ್ದಾರೆ. ಇನ್ನು ಈ ಸರಳ ವಿವಾಹ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಜೋಶ್ ಇಂಗ್ಲಿಸ್, ಶಾನ್ ಅಬ್ಬೋಟ್, ಪೀಟರ್ ಸಿಡ್ಲ್, ಅಲೆಕ್ಸ್ ಕ್ಯಾರಿ, ಕ್ರಿಸ್ ಗ್ರೀನ್, ಮಿಚೆಲ್ ಸ್ವೀಪ್ಸನ್ ಮತ್ತು ಮ್ಯಾಟ್ ರೆನ್ಶಾ ಕಾಣಿಸಿಕೊಂಡಿದ್ದರು.
4 / 6
ವಿಶೇಷ ಎಂದರೆ ಎಮ್ಮಾ ಮೆಕಾರ್ಥಿ ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಮಿಚೆಲ್ ಮಾರ್ಷ್ ಅವರ ಮಾಜಿ ಗರ್ಲ್ ಫ್ರೆಂಡ್. ಮಾರ್ಷ್ ಜೊತೆಗಿನ ಬ್ರೇಕ್ ಅಪ್ ಬಳಿಕ ಎಮ್ಮಾ ನಾಥನ್ ಲಿಯಾನ್ ಜೊತೆ ಡೇಟಿಂಗ್ ಆರಂಭಿಸಿದ್ದರು. ಇದೀಗ ಎಮ್ಮಾ ಜೊತೆ ನಾಥನ್ ಲಿಯಾನ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
5 / 6
ಪ್ರಸ್ತುತ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ನಾಥನ್ ಲಿಯಾನ್, ಇದುವರೆಗೆ 110 ಟೆಸ್ಟ್ ಪಂದ್ಯಗಳಲ್ಲಿ 438 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ 20 ಬಾರಿ ಐದು ವಿಕೆಟ್‌ಗಳು ಮತ್ತು ಮೂರು ಬಾರಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಆಸೀಸ್ ದಂತಕಥೆಗಳಾದ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ನಂತರ ಆಸ್ಟ್ರೇಲಿಯಾದ ಮೂರನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ