David Warner: ಚಾನ್ಸೇ ಇಲ್ಲ… ಡೇವಿಡ್ ವಾರ್ನರ್​ಗೆ ನಿರಾಸೆ..!

Champions Trophy 2025: ಬಹುನಿರೀಕ್ಷಿತ ಚಾಂಪಿಯನ್ಸ್​ ಟ್ರೋಫಿ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಡೇವಿಡ್ ವಾರ್ನರ್ ಬಯಸಿದ್ದರು. ಆದರೀಗ 37 ವರ್ಷದ ವಾರ್ನರ್ ಅವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬೋರ್ಡ್ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ತಿಳಿಸಿದ್ದಾರೆ.

|

Updated on: Jul 16, 2024 | 7:58 AM

ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೀಗ ಈ ಇಂಗಿತವನ್ನು ಪುರಸ್ಕರಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್​ ಬೈಲಿ ತಿಳಿಸಿದ್ದಾರೆ.

1 / 6
ಆಯ್ಕೆಯಾಗುವುದಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪರ ಆಡಲು ನಾನಂತು ಸಿದ್ಧನಿದ್ದೇನೆ. ಈ ಮೂಲಕ ಅವಕಾಶ ಸಿಕ್ಕರೆ ಖಂಡಿತ ಏಕದಿನ ಕ್ರಿಕೆಟ್​ಗೆ ಕಂಬ್ಯಾಕ್ ಮಾಡುವುದಾಗಿ ವಾರ್ನರ್ ತಿಳಿಸಿದ್ದರು. ಹೀಗಾಗಿ 2025ರ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ವಾರ್ನರ್ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಗಳಾಗಿತ್ತು.

2 / 6
ಆದರೀಗ ಡೇವಿಡ್ ವಾರ್ನರ್ ಬಯಸಿದರೂ, ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಸ್ಪಷ್ಟಪಡಿಸಿದ್ದಾರೆ. ಡೇವಿಡ್ ಅವರು ಎಲ್ಲಾ ಮೂರು ಸ್ವರೂಪಗಳಿಂದಲೂ ನಿವೃತ್ತರಾಗಿದ್ದಾರೆ. ಅವರ ಕೊಡುಗೆಯನ್ನು ನಾವು ಶ್ಲಾಘಿಸಲೇಬೇಕು. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಬೈಲಿ ಹೇಳಿದ್ದಾರೆ.

3 / 6
ಇದರೊಂದಿಗೆ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು. ಅಲ್ಲದೆ ವಾರ್ನರ್ ಸ್ಥಾನದಲ್ಲಿ ಈಗಾಗಲೇ ಯುವ ಸ್ಪೋಟಕ ದಾಂಡಿಗ ಜೇಕ್ ಫ್ರೇಸರ್ ಮೆಕ್​ಗುರ್ಕ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜೇಕ್ ಫ್ರೇಸರ್ ಆಸೀಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನಬಹುದು.

4 / 6
ಏಕದಿನ ಕ್ರಿಕೆಟ್​ನಲ್ಲಿ ಆಸೀಸ್ ಪರ 161 ಪಂದ್ಯಗಳಲ್ಲಿ 159 ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ 6932 ರನ್ ಕಲೆಹಾಕಿದ್ದಾರೆ. ಈ ವೇಳೆ 22 ಭರ್ಜರಿ ಶತಕ ಹಾಗೂ 33 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ವಾರ್ನರ್ 2300 ಎಸೆತಗಳನ್ನು ಎದುರಿಸಿ 3277 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಭರ್ಜರಿ ಶತಕ ಹಾಗೂ 28 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 6
ಇನ್ನು 112 ಟೆಸ್ಟ್ ಪಂದ್ಯಗಳನ್ನಾಡಿರುವ ವಾರ್ನರ್ 205 ಇನಿಂಗ್ಸ್​ಗಳಲ್ಲಿ 3 ದ್ವಿಶತಕ, 26 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ಪರ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

6 / 6
Follow us
ಮೈಸೂರು ಬೀದಿಗಳಲ್ಲಿ ಸರ್ವಾಲಂಕೃತಗೊಂಡ ಆನೆಗಳ ಗಾಂಬೀರ್ಯ ನಡಿಗೆ ನೋಡಲು ಚಂದ!

Video: ಬೆಂಗಳೂರು, ಮೆಟ್ರೋ ಇಲ್ಲದೆ ಪ್ರಯಾಣಿಕರ ಪರದಾಟ

ರಿಷಬ್ ಶೆಟ್ಟಿ​ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ

ಉತ್ತಮ ಆರೋಗ್ಯಕ್ಕಾಗಿ ಯಾವ ಮಂತ್ರವನ್ನು ಪಠಿಸಬೇಕು? ಈ ವಿಡಿಯೋ ನೋಡಿ

Nithya Bhavishya: ಶ್ರಾವಣ ಮಾಸದ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ

ಶಿವಕುಮಾರ್ ಮಾತನ್ನು ಸಿದ್ದರಾಮಯ್ಯ ಮೆಚ್ಚಿ ಅಭಿಮಾನದಿಂದ ತಲೆದೂಗಿದರು!

ಸಿಬಿಐ ತನಿಖೆ ಮಾಡುತ್ತಿದ್ದ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾಯಿಸಬಹುದೇ?

ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ನೀಡಿದರೆ ಕುಮಾರಸ್ವಾಮಿಗೆ ಕಂಟಕವಾಗಲಿದೆಯೇ?

ಪೋಲೆಂಡ್‌ನಲ್ಲಿ 3 ವಿಶೇಷ ಸ್ಮಾರಕಗಳಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ

‘ನನ್ನ ಇಡೀ ಫ್ಯಾಮಿಲಿ ಮೇಲೆ ದರ್ಶನ್ ಋಣ ಇದೆ’: ಜೈಲಿನ ಎದುರು ರಚಿತಾ ಭಾವುಕ