18 ವರ್ಷದ ಆಯುಷ್ ಆರ್ಭಟಕ್ಕೆ ರೋಹಿತ್ ಶರ್ಮಾ ವಿಶ್ವದಾಖಲೆ ಧ್ವಂಸ

Updated on: Nov 29, 2025 | 3:28 PM

Ayush Mhatre Breaks Rohit Sharma Record: 2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಯುಷ್ ಮ್ಹಾತ್ರೆ ವಿದರ್ಭ ವಿರುದ್ಧ ಭರ್ಜರಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದರು. 18 ವರ್ಷದ ಆಯುಷ್, ಟಿ20, ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಅವರ ದೀರ್ಘಕಾಲದ ದಾಖಲೆಯನ್ನು ಆಯುಷ್ ಮ್ಹಾತ್ರೆ ಮುರಿದು ತಮ್ಮ ಹೆಸರಿಗೆ ಬರೆದುಕೊಂಡರು.

1 / 5
2025-26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ವಿದರ್ಭ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ವಿದರ್ಭ ವಿರುದ್ಧ ಅಬ್ಬರದ ಶತಕ ಸಿಡಿಸಿದ ಆಯುಷ್, ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

2 / 5
ವಿದರ್ಭ ನೀಡಿದ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಪರ ಆಯುಷ್ ಮ್ಹಾತ್ರೆ ಕೇವಲ 53 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರು. ಅವರ ಇನ್ನಿಂಗ್ಸ್​ನಲ್ಲಿ ಎಂಟು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳು ಸೇರಿದ್ದವು. ಇದು ಟಿ20 ಸ್ವರೂಪದಲ್ಲಿ ಆಯುಷ್ ಅವರ ಮೊದಲ ಶತಕವಾಗಿತ್ತು. ಆಯುಷ್ ಟಿ20 ಸ್ವರೂಪದ ಜೊತೆಗೆ ಈ ಹಿಂದೆ ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಶತಕ ಬಾರಿಸಿದ್ದಾರೆ.

3 / 5
ಇದರೊಂದಿಗೆ ಆಯುಷ್ ಮ್ಹಾತ್ರೆ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ (ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ 20) ಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಯುಷ್ 18 ವರ್ಷ ಮತ್ತು 135 ದಿನಗಳಲ್ಲಿ ಈ ಸಾಧನೆ ಮಾಡಿದ್ದು, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

4 / 5
ವಾಸ್ತವವಾಗಿ ರೋಹಿತ್ ಶರ್ಮಾ 19 ವರ್ಷ 339 ದಿನಗಳಲ್ಲಿ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಬಾರಿಸಿ ಈ ದಾಖಲೆ ಕೊರಳೊಡ್ಡಿದ್ದರು. ಇದೀಗ ಆ ದಾಖಲೆ ಆಯುಷ್ ಪಾಲಾಗಿದೆ. ಇನ್ನು 20ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದ ಭಾರತದ ಮಾಜಿ ಆಟಗಾರ ಉನ್ಮುಕ್ತ್ ಚಂದ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ 20 ವರ್ಷ 62 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

5 / 5
ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ, ಆಯುಷ್ ಮ್ಹಾತ್ರೆ 13 ಪ್ರಥಮ ದರ್ಜೆ ಪಂದ್ಯಗಳು, 7 ಲಿಸ್ಟ್ ಎ ಪಂದ್ಯಗಳು ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 5 ಶತಕಗಳನ್ನು ಸಿಡಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ 660 ರನ್‌ಗಳು, ಲಿಸ್ಟ್ ಎ ಪಂದ್ಯಗಳಲ್ಲಿ 458 ರನ್‌ಗಳು ಮತ್ತು ಟಿ20 ಪಂದ್ಯಗಳಲ್ಲಿ 368 ರನ್‌ ಕಲೆಹಾಕಿದ್ದಾರೆ. ಕಳೆದ ಐಪಿಎಲ್​ನಲ್ಲಿ ಸಿಎಸ್‌ಕೆ ಪರ ಪಾದಾರ್ಪಣೆ ಮಾಡಿದ್ದ ಆಯುಷ್ ಆಡಿದ್ದ 7 ಪಂದ್ಯಗಳಲ್ಲಿ 240 ರನ್‌ ಬಾರಿಸಿದ್ದರು.