
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹತ್ವದ ಬದಲಾವಣೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗಂಭೀರ ಚಿಂತನೆ ನಡೆಸುತ್ತಿದೆ. ಈ ಬದಲಾವಣೆಯೊಂದಿಗೆ ಐಪಿಎಲ್ ಆರಂಭದ ತಿಂಗಳು ಕೂಡ ಬದಲಾಗಲಿದೆ. (PC: IPL)

ಸಾಮಾನ್ಯವಾಗಿ ಐಪಿಎಲ್ ಅನ್ನು ಮಾರ್ಚ್ ತಿಂಗಳಿಂದ ಆರಂಭಿಸಿ ಮೇ ತಿಂಗಳಲ್ಲಿ ಕೊನೆಗೊಳಿಸಲಾಗುತ್ತದೆ. ಆದರೆ ಮುಂಬರುವ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಗೆ ಸ್ಥಳಾಂತರಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. (PC: IPL)

ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಅವರ ಪ್ರಕಾರ, ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣ, ಬೇಸಿಗೆಯ ಅತಿಯಾದ ಶಾಖ ಮತ್ತು ಆಟಗಾರರ ಆಯಾಸ. ಅಂದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತಿದೆ. (PC: TIE)

ಬೇಸಿಗೆಯಲ್ಲಿ ಟೂರ್ನಿ ಆಡುವುದರಿಂದ ಆಟಗಾರರಲ್ಲಿ ತೀವ್ರ ಆಯಾಸ, ನಿರ್ಜಲೀಕರಣ ಮತ್ತು ಗಾಯದ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಸ್ಟೇಡಿಯಂಗೆ ಬರುವ ಪ್ರೇಕ್ಷಕರಿಗೂ ಈ ಬಿಸಿಲು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. (PC: IPL)

ಅತ್ತ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಭಾರತದಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳ ಕಾಲ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ಜಾಹೀರಾತುಗಳ ಹರಿವು ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಐಪಿಎಲ್ ನಡೆಸುವುದರಿಂದ ಬ್ರಾಂಡ್‌ಗಳು ಮತ್ತು ಬ್ರಾಡ್‌ಕಾಸ್ಟರ್‌ಗಳಿಗೆ (ಪ್ರಸಾರಕರು) ಭಾರಿ ಆರ್ಥಿಕ ಲಾಭ ಸಿಗಲಿದೆ. (PC: IPL)

ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ವಿಂಡೋ ಬದಲಿಸಲು ಚಿಂತಿಸಲಾಗಿದೆ. ಇದಾಗ್ಯೂ ಐಪಿಎಲ್ 2027 ಮಾರ್ಚ್-ಮೇ ತಿಂಗಳಲ್ಲೇ ನಡೆಯಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ 2028ರ ಐಪಿಎಲ್ ಸೀಸನ್ ಅನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಗೆ ಸ್ಥಳಾಂತರಿಸುವುದು ಬಹುತೇಕ ಖಚಿತ ಎಂದೇ ಹೇಳಬಹುದು. (PC: IPL)
Published On - 7:22 am, Thu, 11 June 26