AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಟ್ಟುನಿಟ್ಟಿನ ಕ್ರಮ ಕೆಲಸ ಮಾಡಿದೆ’; ಕಿಶನ್- ಶ್ರೇಯಸ್ ವಿರುದ್ಧದ ಕ್ರಮದ ಬಗ್ಗೆ ಜಯ್ ಶಾ ಸ್ಪಷ್ಟನೆ

BCCI Secretary Jay Shah: ನಾವು ಸ್ವಲ್ಪ ಕಟ್ಟುನಿಟ್ಟಾಗಿದ್ದೇವೆ. ರವೀಂದ್ರ ಜಡೇಜಾ ಗಾಯಗೊಂಡಾಗ ಅವರಿಗೆ ಕರೆ ಮಾಡಿ ದೇಶೀಯ ಪಂದ್ಯಗಳನ್ನು ಆಡುವಂತೆ ಹೇಳಿದ್ದು ನಾನೇ. ಇದೀಗ ಗಾಯಾಳುವಾಗಿ ಹೊರಗಿರುವವರು ದೇಶಿಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಸಾಬೀತುಪಡಿಸಿದ ನಂತರವೇ ಭಾರತ ತಂಡಕ್ಕೆ ಸೇರಿಕೊಳ್ಳುವುದು ಎಂದು ಜಯ್ ಶಾ ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Aug 17, 2024 | 3:36 PM

Share
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ಆಟಗಾರರ ವಿರುದ್ಧ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಂದು ಈ ಇಬ್ಬರೂ ಆಟಗಾರರು ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಜಯ್ ಶಾ ಹೇಳಿಕೆ ನೀಡಿದ್ದಾರೆ.

1 / 6
ವಾಸ್ತವವಾಗಿ ಈ ಇಬ್ಬರು ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡಿದ ಕಾರಣ ಈ ವರ್ಷದ ಆರಂಭದಲ್ಲಿ ಬಿಸಿಸಿಐ ತನ್ನ ಕೇಂದ್ರ ಒಪ್ಪಂದದಿಂದ ಈ ಇಬ್ಬರನ್ನು ಕೈಬಿಟ್ಟಿತ್ತು. ಇದರ ಜೊತೆಗೆ ಈ ಇಬ್ಬರು ಟೀಂ ಇಂಡಿಯಾಕ್ಕೆ ಮರಳಬೇಕೆಂದರೆ, ದೇಶೀಯ ಕ್ರಿಕೆಟ್​ ಆಡಲೇಬೇಕು ಎಂಬ ಎಚ್ಚರಿಕೆ ಕೂಡ ನೀಡಿತ್ತು.

2 / 6
ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಯಂತೆ ಇದೀಗ ಈ ಇಬ್ಬರು ಆಟಗಾರರು ದೇಶೀ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಪ್ರಸ್ತುತ ಬುಚ್ಚಿ ಬಾಬು ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಜಾರ್ಖಂಡ್ ಪರ ಆಡುತ್ತಿರುವ ಇಶಾನ್ ಕಿಶನ್ ಆಡಿದ ಮೊದಲ ಪಂದ್ಯದಲ್ಲೇ ಮಧ್ಯಪ್ರದೇಶ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ.

3 / 6
ಇನ್ನು ಗೌತಮ್ ಗಂಭೀರ್ ತಂಡದ ಮುಖ್ಯ ಕೋಚ್ ಆದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶ್ವಿಯಾಗಿರುವ ಶ್ರೇಯಸ್ ಅಯ್ಯರ್ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ದೇಶೀ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಗಮನಾರ್ಹ ಪ್ರದರ್ಶನ ನೀಡದಿದ್ದರೆ, ಅವರನ್ನು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೈಬಿಡುವ ಸಾಧ್ಯತೆಗಳಿವೆ.

4 / 6
ಈ ಇಬ್ಬರ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ನಾವು ಸ್ವಲ್ಪ ಕಟ್ಟುನಿಟ್ಟಾಗಿದ್ದೇವೆ. ರವೀಂದ್ರ ಜಡೇಜಾ ಗಾಯಗೊಂಡಾಗ ಅವರಿಗೆ ಕರೆ ಮಾಡಿ ದೇಶೀಯ ಪಂದ್ಯಗಳನ್ನು ಆಡುವಂತೆ ಹೇಳಿದ್ದು ನಾನೇ. ಇದೀಗ ಗಾಯಾಳುವಾಗಿ ಹೊರಗಿರುವವರು ದೇಶಿಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಸಾಬೀತುಪಡಿಸಿದ ನಂತರವೇ ಭಾರತ ತಂಡಕ್ಕೆ ಸೇರಿಕೊಳ್ಳುವುದು ಎಂದು ಜಯ್ ಶಾ ಹೇಳಿದ್ದಾರೆ.

5 / 6
ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಕೆಲಸದ ಹೊರೆ ನಿರ್ವಹಣೆಯ ಅಡಿಯಲ್ಲಿ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಟೀಂ ಇಂಡಿಯಾ ಒಂದು ತಿಂಗಳ ನಂತರ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

6 / 6
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು

ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್

‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ

ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?