- Kannada News Photo gallery Cricket photos Bhuvneshwar Kumar and his wife nupur blessed with a baby girl
ಟೀಂ ಇಂಡಿಯಾ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್- ನುಪುರ್ ದಂಪತಿಗೆ ಹೆಣ್ಣು ಮಗು ಜನನ
Bhuvneshwar Kumar: ಭುವಿಗೆ ಫೋನ್ ಮೂಲಕ ಈ ಶುಭ ಸುದ್ದಿ ಸಿಕ್ಕಿದೆ. ಭುವನೇಶ್ವರ್ ಕುಮಾರ್ ಗುರುವಾರ ಮೀರತ್ ತಲುಪಲಿದ್ದು, ಮೊದಲ ಬಾರಿಗೆ ಮಗಳನ್ನು ನೋಡಲಿದ್ದಾರೆ.
Updated on: Nov 24, 2021 | 4:44 PM

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಮನೆಯಲ್ಲಿ ಬುಧವಾರ ಸಂಭ್ರಮ ಮನೆ ಮಾಡಿದೆ. ಭುವನೇಶ್ವರ್ ಕುಮಾರ್ ಅವರ ಪತ್ನಿ ನೂಪುರ್ ತಾಯಿಯಾಗಿದ್ದು, ಅವರಿಗೆ ಹೆಣ್ಣು ಮಗು ಜನಿಸಿದೆ. ಭುವನೇಶ್ವರ್ ಅವರ ಪತ್ನಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಭುವನೇಶ್ವರ್ ಕುಮಾರ್ ಅವರ ವಿವಾಹದ ನಾಲ್ಕನೇ ವಾರ್ಷಿಕೋತ್ಸವದ ಎರಡನೇ ದಿನದಂದು ಅವರ ಮನೆಗೆ ಮಗಳು ಎಂಟ್ರಿಕೊಟ್ಟಿದ್ದಾಳೆ. ಭುವಿ ಮತ್ತು ನೂಪುರ್ ಅವರು ನವೆಂಬರ್ 23, 2017 ರಂದು ವಿವಾಹವಾದರು. ಭುವನೇಶ್ವರ್ ಅವರ ಮನೆಯಲ್ಲಿ ಮಗಳ ಜನನವು ತುಂಬಾ ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಈ ವರ್ಷ ಅವರು ಬಹಳಷ್ಟು ದುಃಖವನ್ನು ಕಂಡಿದ್ದಾರೆ.

ಭುವನೇಶ್ವರ್ ಕುಮಾರ್ ಈ ವರ್ಷದ ಮೇ ತಿಂಗಳಲ್ಲಿ ತಂದೆಯನ್ನು ಕಳೆದುಕೊಂಡರು. ಅವರ ತಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಎಷ್ಟು ಚಿಕಿತ್ಸೆ ನೀಡಿದರೂ ತಂದೆಯನ್ನು ಉಳಿಸಲಾಗಲಿಲ್ಲ.

ಭುವಿ ಪತ್ನಿ ನೂಪುರ್ ಮಗಳಿಗೆ ಜನ್ಮ ನೀಡಿದಾಗ ಟೀಂ ಇಂಡಿಯಾದ ಈ ಆಟಗಾರ ಆ ಸಮಯದಲ್ಲಿ ಅವರ ಜೊತೆಗಿರಲಿಲ್ಲ. ಭುವಿಗೆ ಫೋನ್ ಮೂಲಕ ಈ ಶುಭ ಸುದ್ದಿ ಸಿಕ್ಕಿದೆ. ಭುವನೇಶ್ವರ್ ಕುಮಾರ್ ಗುರುವಾರ ಮೀರತ್ ತಲುಪಲಿದ್ದು, ಮೊದಲ ಬಾರಿಗೆ ಮಗಳನ್ನು ನೋಡಲಿದ್ದಾರೆ.

ವಾಸ್ತವವಾಗಿ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ T20 ಸರಣಿಯನ್ನು ಆಡಿದ್ದರು. ಈ ವೇಗದ ಬೌಲರ್ 3 ಟಿ20ಗಳಲ್ಲಿ 3 ವಿಕೆಟ್ ಪಡೆದರು. ಭುವಿ ಲಯದಲ್ಲಿ ಕಾಣಿಸಿಕೊಂಡಿದ್ದು ಭಾರತೀಯ ಕ್ರಿಕೆಟ್‌ಗೆ ಸಂತಸದ ಸುದ್ದಿಯಾಗಿದೆ.




