ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಸಿದ್ಧತೆಗಳು ಶುರುವಾಗಿದೆ. ಮುಂದಿನ ಸೀಸನ್ಗಾಗಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ 8 ಫ್ರಾಂಚೈಸಿಗಳು ಆಟಗಾರರ ರಿಟೈನ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅದರಂತೆ ಬಹುತೇಕ ತಂಡಗಳು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಖಚಿತ. ಆದರೆ ಕೆಲ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದು, ಹೀಗಾಗಿ ಈ ಹಿಂದಿನ ತಂಡಗಳಿಂದ ಹೊರಬರಲಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಡೇವಿಡ್ ವಾರ್ನರ್ ಹೆಸರುಗಳಿವೆ.