Chris Gayle: ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ವಿದಾಯಕ್ಕೆ ವೇದಿಕೆ ಸಿದ್ದ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 08, 2021 | 4:07 PM
Chris Gayle Retirement: ವೆಸ್ಟ್ ಇಂಡೀಸ್ ಪರ 103 ಟೆಸ್ಟ್, 301 ODI ಮತ್ತು 79 T20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಟೆಸ್ಟ್‌ನಲ್ಲಿ 7214 ರನ್, ಏಕದಿನದಲ್ಲಿ 10480 ರನ್ ಹಾಗೂ ಟಿ20ಯಲ್ಲಿ 1899 ರನ್ ಗಳಿಸಿದ್ದಾರೆ.
1 / 6
ಐಸಿಸಿ ಟಿ20 ವಿಶ್ವಕಪ್ ಮೂಲಕ ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೋ (Dwayne Bravo) ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಬ್ರಾವೋ ಗೌರವಪೂರ್ವಕ ವಿದಾಯ ಪಡೆದರು. ಇದೇ ಪಂದ್ಯದ ವೇಳೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (Chris Gayle) ಕೂಡ ವಿದಾಯ ಸುಳಿವು ನೀಡಿದ್ದರು.
2 / 6
ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದ ವೇಳೆ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದರು. ಆದರೆ ಇದು ನನ್ನ ಕೊನೆಯ ಪಂದ್ಯವಲ್ಲ ಎಂಬುದನ್ನು ಆ ಬಳಿಕ ಗೇಲ್ ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೆ ತವರು ಸ್ಟೇಡಿಯಂ ಜಮೈಕಾದಲ್ಲಿ ಕೊನೆಯ ಪಂದ್ಯವಾಡುವ ಇಂಗಿತ ಹೊಂದಿದ್ದೇನೆ. ಆ ಪಂದ್ಯದ ಮೂಲಕ ವಿದಾಯ ಹೇಳುವುದಾಗಿ ಕ್ರಿಸ್ ಗೇಲ್ ತಿಳಿಸಿದ್ದರು.
3 / 6
ಇದೀಗ ಕ್ರಿಸ್ ಗೇಲ್ ಅವರ ವಿದಾಯಕ್ಕಾಗಿ ವೇದಿಕೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮುಂಬರುವ ಸರಣಿಯ ವೇಳಾಪಟ್ಟಿಯನ್ನೂ ಕೂಡ ಪ್ರಕಟಿಸಿದೆ. ಐರ್ಲೆಂಡ್ ವಿರುದ್ದ ನಡೆಯಲಿರುವ ಈ ಸರಣಿಯಲ್ಲಿ ಜಮೈಕಾದಲ್ಲಿ ಒಂದು ಪಂದ್ಯ ನಡೆಯಲಿರುವುದು ವಿಶೇಷ. ಅದು ಕೂಡ ಟಿ20 ಪಂದ್ಯ ಎಂಬುದು ಮತ್ತೊಂದು ವಿಶೇಷ.
4 / 6
ಅಂದರೆ ಕ್ರಿಸ್ ಗೇಲ್ ಅವರ ವಿದಾಯಕ್ಕಾಗಿ ಜಮೈಕಾ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ಏಕೈಕ ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಈ ಒಂದು ಪಂದ್ಯವನ್ನು ಹೊರತುಪಡಿಸಿ 3 ಏಕದಿನ ಪಂದ್ಯಗಳು ನಡೆಯಲಿದೆ. ಅದರಂತೆ ಜನವರಿ 16 ರಂದು ನಡೆಯಲಿರುವ ಐರ್ಲೆಂಡ್ ವಿರುದ್ದದ ಟಿ20 ಪಂದ್ಯವು ಕ್ರಿಸ್ ಗೇಲ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ ಎಂದು ತಿಳಿದು ಬಂದಿದೆ.
5 / 6
ವೆಸ್ಟ್ ಇಂಡೀಸ್ ತಂಡಕ್ಕೆ ಹಲವು ಸ್ಮರಣೀಯ ಗೆಲುವನ್ನು ತಂದುಕೊಟ್ಟಿರುವ ಕ್ರಿಸ್ ಗೇಲ್ ಅವರಿಗೆ ಕೊನೆಯ ಪಂದ್ಯವಾಡಲು ತವರಿಗಿಂತ ಸೂಕ್ತ ಮೈದಾನ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ. ತನ್ನೆಲ್ಲಾ ಅಭಿಮಾನಿಗಳಿಗೆ ಕೊನೆಯ ಪಂದ್ಯದ ಮೂಲಕ ವಿದಾಯ ಹೇಳಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಡುತ್ತಿರುವುದಾಗಿ CWI ನ ಮುಖ್ಯ ಕಾರ್ಯನಿರ್ವಾಹಕ ಜಾನಿ ಗ್ರೇವ್ ತಿಳಿಸಿದ್ದಾರೆ. ಇದರೊಂದಿಗೆ 42 ವರ್ಷದ ಕ್ರಿಸ್ ಗೇಲ್ ಜನವರಿ 16 ರಂದು ಐರ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವುದು ಖಚಿತವಾಗಿದೆ.
6 / 6
ವೆಸ್ಟ್ ಇಂಡೀಸ್ ಪರ 103 ಟೆಸ್ಟ್, 301 ODI ಮತ್ತು 79 T20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಟೆಸ್ಟ್‌ನಲ್ಲಿ 7214 ರನ್, ಏಕದಿನದಲ್ಲಿ 10480 ರನ್ ಹಾಗೂ ಟಿ20ಯಲ್ಲಿ 1899 ರನ್ ಗಳಿಸಿದ್ದಾರೆ.
Published On - 4:02 pm, Wed, 8 December 21