ಇನ್ನು ಟಾಪ್ 10 ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನಂ.1 ಬ್ಯಾಟರ್ ಆಗಿ ಉಳಿದಿದ್ದಾರೆ. ಮತ್ತೊಂದೆಡೆ ಭಾರತದ ಪರ ರೋಹಿತ್ ಶರ್ಮಾ (5) ಮತ್ತು ವಿರಾಟ್ ಕೊಹ್ಲಿ (6) ತಮ್ಮ ಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದರೂ, ಹಾಗೆಯೇ ಕೊಹ್ಲಿ ಮುಂಬೈ ಟೆಸ್ಟ್ ಮಾತ್ರ ಆಡಿದರೂ ಅವರ ಸ್ಥಾನದಲ್ಲಿ ಪಲ್ಲಟವಾಗಿಲ್ಲ ಎಂಬುದು ವಿಶೇಷ. ಮತ್ತೊಂದೆಡೆ, ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಲುಪಿದ್ದಾರೆ.