AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chris Gayle: ಯೂನಿವರ್ಸ್​ ಬಾಸ್ ಕ್ರಿಸ್ ಗೇಲ್ ವಿದಾಯಕ್ಕೆ ವೇದಿಕೆ ಸಿದ್ದ..!

Chris Gayle Retirement: ವೆಸ್ಟ್ ಇಂಡೀಸ್ ಪರ 103 ಟೆಸ್ಟ್, 301 ODI ಮತ್ತು 79 T20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಟೆಸ್ಟ್‌ನಲ್ಲಿ 7214 ರನ್, ಏಕದಿನದಲ್ಲಿ 10480 ರನ್ ಹಾಗೂ ಟಿ20ಯಲ್ಲಿ 1899 ರನ್ ಗಳಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್|

Updated on:Dec 08, 2021 | 4:07 PM

Share
ಐಸಿಸಿ ಟಿ20 ವಿಶ್ವಕಪ್​ ಮೂಲಕ ವೆಸ್ಟ್ ಇಂಡೀಸ್​ ತಂಡದ ಆಲ್​ರೌಂಡರ್ ಡ್ವೇನ್ ಬ್ರಾವೋ (Dwayne Bravo) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಬ್ರಾವೋ ಗೌರವಪೂರ್ವಕ ವಿದಾಯ ಪಡೆದರು. ಇದೇ ಪಂದ್ಯದ ವೇಳೆ ಯೂನಿವರ್ಸ್​ ಬಾಸ್ ಕ್ರಿಸ್ ಗೇಲ್ (Chris Gayle) ಕೂಡ ವಿದಾಯ ಸುಳಿವು ನೀಡಿದ್ದರು.

1 / 6
 ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದ ವೇಳೆ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದರು. ಆದರೆ ಇದು ನನ್ನ ಕೊನೆಯ ಪಂದ್ಯವಲ್ಲ ಎಂಬುದನ್ನು ಆ ಬಳಿಕ ಗೇಲ್ ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲದೆ ತವರು ಸ್ಟೇಡಿಯಂ ಜಮೈಕಾದಲ್ಲಿ ಕೊನೆಯ ಪಂದ್ಯವಾಡುವ ಇಂಗಿತ ಹೊಂದಿದ್ದೇನೆ. ಆ ಪಂದ್ಯದ ಮೂಲಕ ವಿದಾಯ ಹೇಳುವುದಾಗಿ ಕ್ರಿಸ್ ಗೇಲ್ ತಿಳಿಸಿದ್ದರು.

2 / 6
ಇದೀಗ ಕ್ರಿಸ್ ಗೇಲ್ ಅವರ ವಿದಾಯಕ್ಕಾಗಿ ವೇದಿಕೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮುಂಬರುವ ಸರಣಿಯ ವೇಳಾಪಟ್ಟಿಯನ್ನೂ ಕೂಡ ಪ್ರಕಟಿಸಿದೆ. ಐರ್ಲೆಂಡ್ ವಿರುದ್ದ ನಡೆಯಲಿರುವ ಈ ಸರಣಿಯಲ್ಲಿ ಜಮೈಕಾದಲ್ಲಿ ಒಂದು ಪಂದ್ಯ ನಡೆಯಲಿರುವುದು ವಿಶೇಷ. ಅದು ಕೂಡ ಟಿ20 ಪಂದ್ಯ ಎಂಬುದು ಮತ್ತೊಂದು ವಿಶೇಷ.

3 / 6
ಅಂದರೆ ಕ್ರಿಸ್ ಗೇಲ್ ಅವರ ವಿದಾಯಕ್ಕಾಗಿ ಜಮೈಕಾ ಸಬೀನಾ ಪಾರ್ಕ್​ ಸ್ಟೇಡಿಯಂನಲ್ಲಿ ಏಕೈಕ ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಈ ಒಂದು ಪಂದ್ಯವನ್ನು ಹೊರತುಪಡಿಸಿ 3 ಏಕದಿನ ಪಂದ್ಯಗಳು​ ನಡೆಯಲಿದೆ. ಅದರಂತೆ ಜನವರಿ 16 ರಂದು ನಡೆಯಲಿರುವ ಐರ್ಲೆಂಡ್ ವಿರುದ್ದದ ಟಿ20 ಪಂದ್ಯವು ಕ್ರಿಸ್ ಗೇಲ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ ಎಂದು ತಿಳಿದು ಬಂದಿದೆ.

4 / 6
ವೆಸ್ಟ್ ಇಂಡೀಸ್ ತಂಡಕ್ಕೆ ಹಲವು ಸ್ಮರಣೀಯ ಗೆಲುವನ್ನು ತಂದುಕೊಟ್ಟಿರುವ ಕ್ರಿಸ್ ಗೇಲ್ ಅವರಿಗೆ ಕೊನೆಯ ಪಂದ್ಯವಾಡಲು ತವರಿಗಿಂತ ಸೂಕ್ತ ಮೈದಾನ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ. ತನ್ನೆಲ್ಲಾ ಅಭಿಮಾನಿಗಳಿಗೆ ಕೊನೆಯ ಪಂದ್ಯದ ಮೂಲಕ ವಿದಾಯ ಹೇಳಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಡುತ್ತಿರುವುದಾಗಿ  CWI ನ ಮುಖ್ಯ ಕಾರ್ಯನಿರ್ವಾಹಕ ಜಾನಿ ಗ್ರೇವ್ ತಿಳಿಸಿದ್ದಾರೆ. ಇದರೊಂದಿಗೆ 42 ವರ್ಷದ ಕ್ರಿಸ್ ಗೇಲ್ ಜನವರಿ 16 ರಂದು ಐರ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವುದು ಖಚಿತವಾಗಿದೆ.

5 / 6
ವೆಸ್ಟ್ ಇಂಡೀಸ್ ಪರ  103 ಟೆಸ್ಟ್, 301 ODI ಮತ್ತು 79 T20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ ಟೆಸ್ಟ್‌ನಲ್ಲಿ 7214 ರನ್,  ಏಕದಿನದಲ್ಲಿ 10480 ರನ್ ಹಾಗೂ ಟಿ20ಯಲ್ಲಿ 1899 ರನ್ ಗಳಿಸಿದ್ದಾರೆ.

6 / 6

Published On - 4:02 pm, Wed, 8 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ