KKR ಫ್ರಾಂಚೈಸಿ ತಂಡಕ್ಕೆ ಇಬ್ಬರು ಪಾಕಿಸ್ತಾನ್ ಆಟಗಾರರು ಆಯ್ಕೆ..!
Caribbean Premier League 2025: ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 14 ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 21 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಗಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಇಬ್ಬರು ಪಾಕಿಸ್ತಾನ್ ವೇಗಿಗಳು ಕೂಡ ಕಾಣಿಸಿಕೊಂಡಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ಸೀಸನ್-14 ಗೆ ಸಿದ್ಧತೆಗಳು ಶುರುವಾಗಿದೆ. ಆಗಸ್ಟ್ 14 ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳ ಘೋಷಣೆಯಾಗಿದೆ. ಈ ತಂಡಗಳಲ್ಲಿ ಕೆಲ ಪಾಕಿಸ್ತಾನ್ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡದಲ್ಲಿ ಇಬ್ಬರು ಪಾಕ್ ವೇಗಿಗಳಿಗೆ ಸ್ಥಾನ ನೀಡಲಾಗಿರುವುದು ವಿಶೇಷ.
1 / 5
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮಾಲೀಕತ್ವದ ಟ್ರಿನ್ಬ್ರಾಗೊ ನೈಟ್ ರೈಡರ್ಸ್ ತಂಡಕ್ಕೆ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಜಮೈಕಾ ತಲ್ಲವಾಸ್ ಮತ್ತು ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅಮೀರ್ ಅವರನ್ನು ಈ ಬಾರಿ ಟಿಕೆಆರ್ ಖರೀದಿಸಿದೆ.
2 / 5
2021 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಅಮೀರ್ ಒಟ್ಟು 39 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 51 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿಯ ಡ್ರಾಫ್ಟ್ ಪ್ರಕ್ರಿಯೆಗೂ ಮುನ್ನ ಆಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು ಪಾಕ್ ವೇಗಿಯನ್ನು ಬಿಡುಗಡೆ ಮಾಡಿತ್ತು.
3 / 5
ಅದರಂತೆ ಡ್ರಾಫ್ಟ್ ಆಯ್ಕೆ ಪಟ್ಟಿಯಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಅಮೀರ್ ಅವರನ್ನು ಟ್ರಿನ್ಬ್ರಾಗೊ ನೈಟ್ ರೈಡರ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ. ಹಾಗೆಯೇ ಪಾಕಿಸ್ತಾನದ ಮತ್ತೋರ್ವ ವೇಗದ ಬೌಲರ್ ಉಸ್ಮಾನ್ ತಾರಿಖ್ ಅವರಿಗೂ ಸ್ಥಾನ ನೀಡಲಾಗಿದೆ. ಈ ಮೂಲಕ ಟಿಕೆಆರ್ ತಂಡವು ತನ್ನ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.