Shivam Dube: CSK ಯಿಂದಾಗಿ ನಾನು ಚೆನ್ನಾಗಿ ಆಡ್ತಿದ್ದೀನಿ: ಶಿವಂ ದುಬೆ

Shivam Dube: ಶಿವಂ ದುಬೆಯನ್ನು ಐಪಿಎಲ್​ಗೆ ಪರಿಚಯಿಸಿದ್ದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ. 2019 ರಲ್ಲಿ ಆರ್​ಸಿಬಿ ದುಬೆಯನ್ನು 5 ಕೋಟಿ ರೂ. ನೀಡಿ ಖರೀದಿಸಿತ್ತು. ಅದರಂತೆ 2019 ಮತ್ತು 2020 ರಲ್ಲಿ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿದ್ದ ಶಿವಂ ದುಬೆ ಕೇವಲ 169 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on:Jan 16, 2024 | 7:22 AM

ಅಫ್ಘಾನಿಸ್ತಾನ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಶಿವಂ ದುಬೆ ಸಂಚಲನ ಸೃಷ್ಟಿಸಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ 60 ರನ್ ಬಾರಿಸಿದ್ದ ದುಬೆ, 2ನೇ ಟಿ20 ಪಂದ್ಯದಲ್ಲಿ 32 ಎಸೆತಗಳಲ್ಲಿ 63 ರನ್ ಚಚ್ಚಿದ್ದರು.

1 / 6
ವಿಶೇಷ ಎಂದರೆ ಈ ಇನಿಂಗ್ಸ್​ಗಳಲ್ಲಿ ಶಿವಂ ಅಜೇಯರಾಗಿ ಉಳಿದಿದ್ದರು. ಅಷ್ಟೇ ಅಲ್ಲದೆ ಬೌಲಿಂಗ್​​​ನಲ್ಲೂ ಕೊಡುಗೆ ನೀಡಿದ್ದ ಶಿವಂ ದುಬೆ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಭರ್ಜರಿ ಪ್ರದರ್ಶನದ ಬಳಿಕ ಮಾತನಾಡಿದ ದುಬೆ ಎಲ್ಲಾ ಶ್ರೇಯಸ್ಸು ಚೆನ್ನೈ ಸೂಪರ್ ಕಿಂಗ್ಸ್​ಗೆ ಸಲ್ಲಬೇಕು ಎಂದಿದ್ದಾರೆ.

2 / 6
ಎರಡೂ ಪಂದ್ಯಗಳಲ್ಲಿನ ನನ್ನ ಅದ್ಭುತ ಆಟದ ಕ್ರೆಡಿಟ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಲ್ಲಬೇಕು. ಸಿಎಸ್​ಕೆ ಫ್ರಾಂಚೈಸಿಯು ಆಟಗಾರನ ಪ್ರತಿಭೆ ಗುರುತಿಸಿ ಆತ್ಮ ವಿಶ್ವಾಸ ತುಂಬುತ್ತಾರೆ. ಆ ಆತ್ಮ ವಿಶ್ವಾಸವೇ ಈ ಸರಣಿಯಲ್ಲಿನ ನನ್ನ ಅದ್ಭುತ ಪ್ರದರ್ಶನಕ್ಕೆ ಕಾರಣ ಎಂದು ಶಿವಂ ದುಬೆ ತಿಳಿಸಿದ್ದಾರೆ.

3 / 6
ಕಳೆದ ಎರಡು ಸೀಸನ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಶಿವಂ ದುಬೆ 2022 ರಲ್ಲಿ 11 ಪಂದ್ಯಗಳಿಂದ 289 ರನ್ ಕಲೆಹಾಕಿದ್ದರು. ಇನ್ನು 2023 ರಲ್ಲಿ ಸಿಎಸ್​ಕೆ ಪರ ಅದ್ಭುತ ಪ್ರದರ್ಶನ ನೀಡಿದ್ದ ದುಬೆ 418 ರನ್​ ಬಾರಿಸಿದ್ದರು. ಈ ಮೂಲಕ ಸಿಎಸ್​ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

4 / 6
ಅಂದಹಾಗೆ ಶಿವಂ ದುಬೆಯನ್ನು ಐಪಿಎಲ್​ಗೆ ಪರಿಚಯಿಸಿದ್ದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ. 2019 ರಲ್ಲಿ ಆರ್​ಸಿಬಿ ದುಬೆಯನ್ನು 5 ಕೋಟಿ ರೂ. ನೀಡಿ ಖರೀದಿಸಿತ್ತು. ಅದರಂತೆ 2019 ಮತ್ತು 2020 ರಲ್ಲಿ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿದ್ದ ಶಿವಂ ದುಬೆ ಕೇವಲ 169 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.

5 / 6
ಆ ಬಳಿಕ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ದುಬೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಇದೀಗ ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

6 / 6

Published On - 7:22 am, Tue, 16 January 24

Follow us
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್

ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್

ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ

ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್

ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು

Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ