- Kannada News Photo gallery Cricket photos CSK CEO confirms Chennai will attempt to bring back ex star in IPL 2022
IPL 2022: ಮೆಗಾ ಹರಾಜಿನಲ್ಲಿ ಆತನೇ ನಮ್ಮ ಟಾರ್ಗೆಟ್…ಸಿಎಸ್ಕೆ ತಂಡದಿಂದ ಘೋಷಣೆ
Mega Auction: ಸಿಎಸ್ಕೆಯು ಮೊದಲ ಆಯ್ಕೆಯಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, 2ನೇ ಆಯ್ಕೆಯಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಇನ್ನು ಮೂರನೇ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಹಾಗೂ 4ನೇ ಆಟಗಾರನಾಗಿ ಮೊಯೀನ್ ಅಲಿಯನ್ನು ಉಳಿಸಿಕೊಂಡಿದೆ.
Updated on: Dec 02, 2021 | 5:31 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮಗೆ ಬೇಕಾದ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕೆಲ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನು ರಿಲೀಸ್ ಮಾಡಲಾಗಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೆಲ ಪ್ರಮುಖ ಆಟಗಾರರು ಇರುವುದು ವಿಶೇಷ.

ಏಕೆಂದರೆ ಸಿಎಸ್ಕೆಯು ಮೊದಲ ಆಯ್ಕೆಯಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, 2ನೇ ಆಯ್ಕೆಯಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಇನ್ನು ಮೂರನೇ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಹಾಗೂ 4ನೇ ಆಟಗಾರನಾಗಿ ಮೊಯೀನ್ ಅಲಿಯನ್ನು ಉಳಿಸಿಕೊಂಡಿದೆ.

ಆದರೆ ನಾಲ್ಕು ಆಟಗಾರರ ರಿಟೈನ್ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದು ಸಿಎಸ್ಕೆ ತಂಡದ ಸ್ಟಾರ್ ಪ್ಲೇಯರ್ ಫಾಫ್ ಡುಪ್ಲೆಸಿಸ್. ಡುಪ್ಲೆಸಿಸ್ ಕಳೆದ ಕೆಲ ವರ್ಷಗಳಿಂದ ಚೆನ್ನೈ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಸಿಎಸ್ಕೆ ತಂಡದ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇನ್ನು ಕಳೆದ ಸೀಸನ್ನಲ್ಲಿ 16 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡುಪ್ಲೆಸಿಸ್ 633 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕೂ ಮುನ್ನ 2020ರ ಸೀಸನ್ನಲ್ಲಿ 13 ಪಂದ್ಯಗಳಲ್ಲಿ 449 ರನ್ ಕಲೆಹಾಕಿದ್ದರು. ಇದಾಗ್ಯೂ ಸಿಎಸ್ಕೆ ತಂಡಕ್ಕೆ ಫಾಫ್ ಡುಪ್ಲೆಸಿಸ್ ಅವರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಆದರೆ ಫಾಫ್ ಡುಪ್ಲೆಸಿಸ್ ಅವರನ್ನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್. ಫಾಫ್ ಅವರು ಕಳೆದ ಎರಡು ಸೀಸನ್ಗಳಲ್ಲಿ ನಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕಳೆದ ಬಾರಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದ ಆಟಗಾರ. ಹೀಗಾಗಿ ಮೆಗಾ ಹರಾಜಿನಲ್ಲಿ ನಾವು ಮತ್ತೆ ಖರೀದಿಸಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಖರೀದಿಗಾಗಿ ನಮ್ಮೆಲ್ಲಾ ಪ್ರಯತ್ನ ಮಾಡಲಿದ್ದೇವೆ. ಇದಾಗ್ಯೂ ಏನಾಗಲಿದೆ ಎಂಬುದು ಗೊತ್ತಿಲ್ಲ. ಆದರೂ ನಮ್ಮ ಪ್ರಯತ್ನವನ್ನಂತು ನಾವು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಆರಂಭಿಕನಾಗಿ ಫಾಫ್ ಡುಪ್ಲೆಸಿಸ್ ಅವರೇ ನಮ್ಮ ಮೊದಲ ಟಾರ್ಗೆಟ್ ಎಂಬುದನ್ನು ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.
