IPL 2022: ಮೆಗಾ ಹರಾಜಿನಲ್ಲಿ ಆತನೇ ನಮ್ಮ ಟಾರ್ಗೆಟ್​…ಸಿಎಸ್​ಕೆ ತಂಡದಿಂದ ಘೋಷಣೆ

Mega Auction: ಸಿಎಸ್​ಕೆಯು ಮೊದಲ ಆಯ್ಕೆಯಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, 2ನೇ ಆಯ್ಕೆಯಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಇನ್ನು ಮೂರನೇ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಹಾಗೂ 4ನೇ ಆಟಗಾರನಾಗಿ ಮೊಯೀನ್ ಅಲಿಯನ್ನು ಉಳಿಸಿಕೊಂಡಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 02, 2021 | 5:31 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮಗೆ ಬೇಕಾದ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕೆಲ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನು ರಿಲೀಸ್ ಮಾಡಲಾಗಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್​ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೆಲ ಪ್ರಮುಖ ಆಟಗಾರರು ಇರುವುದು ವಿಶೇಷ.

1 / 6
ಏಕೆಂದರೆ ಸಿಎಸ್​ಕೆಯು ಮೊದಲ ಆಯ್ಕೆಯಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, 2ನೇ ಆಯ್ಕೆಯಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಇನ್ನು ಮೂರನೇ ಆಟಗಾರನಾಗಿ ರುತುರಾಜ್ ಗಾಯಕ್ವಾಡ್ ಹಾಗೂ 4ನೇ ಆಟಗಾರನಾಗಿ ಮೊಯೀನ್ ಅಲಿಯನ್ನು ಉಳಿಸಿಕೊಂಡಿದೆ.

2 / 6
ಆದರೆ ನಾಲ್ಕು ಆಟಗಾರರ ರಿಟೈನ್ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದು ಸಿಎಸ್​ಕೆ ತಂಡದ ಸ್ಟಾರ್ ಪ್ಲೇಯರ್  ಫಾಫ್ ಡುಪ್ಲೆಸಿಸ್​. ಡುಪ್ಲೆಸಿಸ್​ ಕಳೆದ ಕೆಲ ವರ್ಷಗಳಿಂದ ಚೆನ್ನೈ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಸಿಎಸ್​ಕೆ ತಂಡದ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

3 / 6
 ಇನ್ನು ಕಳೆದ ಸೀಸನ್​ನಲ್ಲಿ 16 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡುಪ್ಲೆಸಿಸ್ 633 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕೂ ಮುನ್ನ 2020ರ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ 449 ರನ್ ಕಲೆಹಾಕಿದ್ದರು. ಇದಾಗ್ಯೂ ಸಿಎಸ್​ಕೆ ತಂಡಕ್ಕೆ ಫಾಫ್​ ಡುಪ್ಲೆಸಿಸ್​ ಅವರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

4 / 6
 ಆದರೆ ಫಾಫ್ ಡುಪ್ಲೆಸಿಸ್​ ಅವರನ್ನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ​ ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್. ಫಾಫ್ ಅವರು ಕಳೆದ ಎರಡು ಸೀಸನ್​ಗಳಲ್ಲಿ ನಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕಳೆದ ಬಾರಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದ ಆಟಗಾರ. ಹೀಗಾಗಿ ಮೆಗಾ ಹರಾಜಿನಲ್ಲಿ ನಾವು ಮತ್ತೆ ಖರೀದಿಸಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

5 / 6
ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಖರೀದಿಗಾಗಿ ನಮ್ಮೆಲ್ಲಾ ಪ್ರಯತ್ನ ಮಾಡಲಿದ್ದೇವೆ. ಇದಾಗ್ಯೂ ಏನಾಗಲಿದೆ ಎಂಬುದು ಗೊತ್ತಿಲ್ಲ. ಆದರೂ ನಮ್ಮ ಪ್ರಯತ್ನವನ್ನಂತು ನಾವು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಆರಂಭಿಕನಾಗಿ ಫಾಫ್ ಡುಪ್ಲೆಸಿಸ್​ ಅವರೇ ನಮ್ಮ ಮೊದಲ ಟಾರ್ಗೆಟ್ ಎಂಬುದನ್ನು ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.

6 / 6
Follow us
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್

ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ

ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು