- Kannada News Photo gallery Cricket photos Kannada News | CSK vs GT IPL 2023 Final Do you know how the CSK players celebrated after winning Title vs Gujarat Titans
CSK Players Celebration: ರಣ ರೋಚಕ ಪಂದ್ಯ ಮುಗಿದ ಬಳಿಕ ಸಿಎಸ್ಕೆ ಆಟಗಾರರ ಸಂಭ್ರಮ ಹೇಗಿತ್ತು ಗೊತ್ತೇ?: ಫೋಟೋ ನೋಡಿ
CSK vs GT, IPL Final: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್ಕೆ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 5 ವಿಕೆಟ್ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು.
Updated on: May 30, 2023 | 12:19 PM

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ ತೆರೆ ಬಿದ್ದಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್ಕೆ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 5 ವಿಕೆಟ್ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು.

ಈ ಪಂದ್ಯದಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಚೆನ್ನೈ ಗೆದ್ದಿದ್ದು ವಿಶೇಷ. ರವೀಂದ್ರ ಜಡೇಜಾ ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು. ಕೊನೆಯ ಓವರ್ನ 6 ಎಸೆತವಂತು ಅಭಿಮಾನಿಗಳನ್ನು ಮಾತ್ರವಲ್ಲದೆ ಎರಡೂ ತಂಡದ ಆಟಗಾರರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಐಪಿಎಲ್ 2023 ಟ್ರೋಫಿಯನ್ನು ಪಡೆದುಕೊಳ್ಳುತ್ತಿರುವ ಎಂಎಸ್ ಧೋನಿ, ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ.

ಪಂದ್ಯ ಮುಗಿದ ಬಳಿಕ ಮಾತುಕತೆಯಲ್ಲಿ ತೊಡಗಿಕೊಂಡ ಎಂಎಸ್ ಧೋನಿ, ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ.

ಐಪಿಎಲ್ 2023 ಟ್ರೋಫಿ ಜೊತೆ ದೀಪಕ್ ಚಹರ್ ಹಾಗೂ ಅವರ ಪತ್ನಿ

ಐಪಿಎಲ್ 2023 ಟ್ರೋಫಿ ಜೊತೆ ರವೀಂದ್ರ ಜಡೇಜಾ ಕುಟುಂಬ

ಐಪಿಎಲ್ 2023 ಟ್ರೋಫಿ ಜೊತೆ ಅಜಿಂಕ್ಯಾ ರಹಾನೆ ಕುಟುಂಬ




