- Kannada News Photo gallery Cricket photos CSK vs RCB See what Virat Kohli did to MS Dhoni When the IPL 2024 First match start
Kohli-Dhoni: ಪಂದ್ಯ ಶುರುವಾದ ತಕ್ಷಣ ವಿರಾಟ್ ಕೊಹ್ಲಿ ಅವರು ಧೋನಿಗೆ ಏನು ಮಾಡಿದ್ರು ನೋಡಿ
CSK vs RCB, IPL 2024: ಐಪಿಎಲ್ 2024ರ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ ಓಪನರ್ ಆಗಿ ಕ್ರೀಸ್ಗೆ ಬಂದರು. ಬ್ಯಾಟಿಂಗ್ ಶುರು ಮಾಡುವ ಮೊದಲು ಕೊಹ್ಲಿ ಮತ್ತು ಧೋನಿ ಒಬ್ಬರನ್ನೊಬ್ಬರು ಭೇಟಿಯಾದರು.
Updated on: Mar 23, 2024 | 9:09 AM

ಚೆಪಾಕ್‌ನಲ್ಲಿ ನಡೆದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿ ಆದವು. ಈ ಮೂಲಕ ಹಳೆಯ ಗೆಳೆಯರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಮತ್ತೆ ಒಂದಾದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ ಓಪನರ್ ಆಗಿ ಕ್ರೀಸ್ಗೆ ಬಂದರು. ಬ್ಯಾಟಿಂಗ್ ಶುರು ಮಾಡುವ ಮೊದಲು ಕೊಹ್ಲಿ ಮತ್ತು ಧೋನಿ ಒಬ್ಬರನ್ನೊಬ್ಬರು ಭೇಟಿಯಾದರು. ಇಬ್ಬರೂ ಅಪ್ಪಿಕೊಂಡು, ಹೆಗಲ ಮೇಲೆ ಕೈ ಹಾಕಿ ನಗುತ್ತಾ ಒಂದಿಷ್ಟು ಮಾತುಕತೆ ನಡೆಸಿದರು.

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಈಜೋಡಿ ನಗುತ್ತಾ ಮಾತನಾಡುತ್ತಿರುವ ಫೋಟೋ ಮತ್ತು ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಇವರಿಬ್ಬರು ಐಪಿಎಲ್ 2022ರಲ್ಲಿ ಕೊನೆಯದಾಗಿ ಪರಸ್ಪರ ಮುಖಾಮುಖಿ ಆಗಿದ್ದರು.

ಈ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಸ್ಕೋರ್ ಕಲೆಹಾಕಲಿಲ್ಲ. 20 ಎಸೆತಗಳಲ್ಲಿ 1 ಸಿಕ್ಸರ್ ಸಿಡಿಸಿ 21 ರನ್ ಗಳಿಸಿ ಔಟಾದರು. ಜೊತೆಗೆ ಆರ್ಸಿಬಿ ಕೂಡ ಸೋಲು ಕಂಡಿತು. ಆದರೆ, ವಿರಾಟ್ ಬಹುದೊಡ್ಡ ಮೈಲುಗಲ್ಲು ಸಾಧಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 12000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕೊಹ್ಲಿ ಟಿ20 ಸ್ವರೂಪದಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಇವರು 377* ಪಂದ್ಯಗಳಲ್ಲಿ 12000* ರನ್ ಗಳಿಸಿದ್ದಾರೆ. ಅವರ ಮೊತ್ತದಲ್ಲಿ 8 ಶತಕಗಳು ಮತ್ತು 91 ಅರ್ಧ ಶತಕಗಳು ಸೇರಿವೆ. ಐಪಿಎಲ್‌ನಲ್ಲಿ ಏಳು ಶತಕ ಹಾಗೂ ಟಿ20ಯಲ್ಲಿ ಒಂದು ಶತಕ ಸಿಡಿಸಿದ್ದಾರೆ.

ಹಾಗೆಯೆ ವಿರಾಟ್ ಕೊಹ್ಲಿ ಟಿ20ಯಲ್ಲಿ 4037 ರನ್ ಗಳಿಸಿದ್ದಾರೆ. ಅವರು ಐಪಿಎಲ್, ಚಾಂಪಿಯನ್ಸ್ ಲೀಗ್ ಮತ್ತು ದೇಶೀಯ ಕ್ರಿಕೆಟ್‌ನಿಂದ ಈ ರನ್ ಕಲೆಹಾಕಿದ್ದಾರೆ. ಐಪಿಎಲ್ ಇತಿಹಾಸದ ಟಿ20 ಲೀಗ್‌ನಲ್ಲಿ 7000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.









