- Kannada News Photo gallery Cricket photos David Warner confirms international retirement after T20 WC
David Warner: ಡೇವಿಡ್ ವಾರ್ನರ್ ನಿವೃತ್ತಿ ಘೋಷಣೆ
David Warner: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಟಿ20 ಕ್ರಿಕೆಟ್ನಲ್ಲಿ ಡೇವಿಡ್ ವಾರ್ನರ್ 100 ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಇದೀಗ ಚುಟುಕು ಕ್ರಿಕೆಟ್ಗೂ ವಿದಾಯ ಹೇಳಲು ಮುಂದಾಗಿರುವುದಾಗಿ ವಾರ್ನರ್ ತಿಳಿಸಿದ್ದಾರೆ.
Updated on: Feb 10, 2024 | 10:07 AM

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner) ಇದೀಗ ಟಿ20 ಕ್ರಿಕೆಟ್ಗೂ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲು ಬಯಸಿದ್ದಾರೆ.

ಅಂದರೆ ಮುಂಬರುವ ಟಿ20 ವಿಶ್ವಕಪ್ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದಾಗಿ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದರೊಂದಿಗೆ 2024 ರಲ್ಲಿ ವಾರ್ನರ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಗೊಳ್ಳುವುದು ಖಚಿತವಾದಂತಾಗಿದೆ.

ಆಸ್ಟ್ರೇಲಿಯಾ ಪರ 100ನೇ ಟಿ20 ಪಂದ್ಯವಾಡಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, ವೆಸ್ಟ್ ಇಂಡೀಸ್ ವಿರುದ್ಧದ ಈ ಪ್ರದರ್ಶನ ಖುಷಿ ನೀಡಿದೆ. ಇನ್ನು ನನ್ನ ಮುಂದಿರುವುದು ಕೇವಲ ತಿಂಗಳು ಮಾತ್ರ. ಹೀಗಾಗಿ ಇದೇ ಫಾರ್ಮ್ ಅನ್ನು ಮುಂದುವರೆಸಲು ಬಯಸುತ್ತೇನೆ. ಏಕೆಂದರೆ ಟಿ20 ವಿಶ್ವಕಪ್ ಬಳಿಕ ನಾನು ಟಿ20 ಕ್ರಿಕೆಟ್ಗೂ ವಿದಾಯ ಹೇಳುತ್ತಿದ್ದೇನೆ ವಾರ್ನರ್ ತಿಳಿಸಿದ್ದಾರೆ.

37ರ ವರ್ಷದ ವಾರ್ನರ್ ಜನವರಿ 1 ರಂದು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೆ ಜನವರಿ 6 ರಂದು ಕೊನೆಯ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದರು. ಇದೀಗ ಮುಂಬರುವ ಟಿ20 ವಿಶ್ವಕಪ್ ಮೂಲಕ ಚುಟುಕು ಕ್ರಿಕೆಟ್ಗೂ ಡೇವಿಡ್ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ.

ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವು ಬಿ ಗ್ರೂಪ್ನಲ್ಲಿದ್ದು, ಈ ಗುಂಪಿನಲ್ಲಿ ಇಂಗ್ಲೆಂಡ್, ನಮೀಬಿಯಾ, ಒಮಾನ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಈ ತಂಡಗಳ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ ತಂಡವು ವಾರ್ನರ್ಗೆ ವಿಶ್ವಕಪ್ ಗೆಲುವಿನ ವಿದಾಯ ನೀಡಲಿದ್ದಾರಾ ಕಾದು ನೋಡಬೇಕಿದೆ.




