ವಾರ್ನರ್ ಅವರ ಮೊಣಕೈ ಮುರಿದ ಕಾರಣ ಇಂಜುರಿಗೆ ತುತ್ತಾಗಿದ್ದು ಮುಂದಿನ ಟೆಸ್ಟ್ಗಳಿಗೆ ಲಭ್ಯವಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ದ್ವಿತೀಯ ಟೆಸ್ಟ್ನ ಮೊದಲ ದಿನ ವಾರ್ನರ್ ಬ್ಯಾಟಿಂಗ್ ಮಾಡುವಾಗ ಸಿರಾಜ್ ಹಾಗೂ ಶಮಿ ಎಸೆತದ ಬೌನ್ಸರ್ಗಳು ಅನೇಕ ಬಾರಿ ಅವರ ದೇಹದ ಮೇಲೆಯೇ ಬಿತ್ತು. ಅದರಲ್ಲೂ ಒಂದು ಸಂದರ್ಭ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದು ಪೆಟ್ಟುಬಿದ್ದಿತು. ಎರಡು ಬಾರಿ ಹೆಲ್ಮೆಟ್ಗೆ ಬಡಿಯಿತು.