‘ಐಪಿಎಲ್​ನಿಂದಾಗಿ ಕ್ರಿಕೆಟ್​ನಲ್ಲಿ ಈ ದೊಡ್ಡ ಬದಲಾವಣೆ ಆಗಲಿದೆ’; ಡೇವಿಡ್ ವಾರ್ನರ್

David Warner: ತಮ್ಮ ಟೆಸ್ಟ್ ನಿವೃತ್ತಿಯ ಬಳಿಕ ತಮ್ಮ ಮನದಾಳವನ್ನು ಬಿಚ್ಚಿಟ್ಟ ವಾರ್ನರ್, ಭವಿಷ್ಯದಲ್ಲಿ ಕೋಚ್​ ಹುದ್ದೆಗೇರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಆಸೀಸ್ ಕ್ರಿಕೆಟಿಗರು ಹೆಸರುವಾಸಿಯಾಗಿರುವ ಸ್ಲೆಡ್ಡಿಂಗ್ ಬಗ್ಗೆಯೂ ವಾರ್ನರ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಪೃಥ್ವಿಶಂಕರ
|

Updated on: Jan 07, 2024 | 4:31 PM

ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಅಂತ್ಯದೊಂದಿಗೆ ಆಸ್ಟ್ರೇಲಿಯಾದ ದಿಗ್ಗಜ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರ ಟೆಸ್ಟ್ ವೃತ್ತಿಜೀವನವೂ ಅಂತ್ಯಗೊಂಡಿದೆ. ಟೆಸ್ಟ್ ಮಾದರಿಯೊಂದಿಗೆ ಏಕದಿನ ಮಾದರಿಗೂ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ.

1 / 6
ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಡೇವಿಡ್ ವಾರ್ನರ್ ತಮ್ಮ ತವರು ನೆಲವಾದ ಸಿಡ್ನಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದರು. ಟೆಸ್ಟ್​ಗೂ ಮುನ್ನವೇ ಏಕದಿನಕ್ಕೆ ವಿದಾಯ ಹೇಳಿದ್ದ ವಾರ್ನರ್ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‌ಗಳಲ್ಲಿ ಆಡಲು ಲಭ್ಯವಿರುತ್ತಾರೆ.

2 / 6
ಇನ್ನು ತಮ್ಮ ಟೆಸ್ಟ್ ನಿವೃತ್ತಿಯ ಬಳಿಕ ತಮ್ಮ ಮನದಾಳವನ್ನು ಬಿಚ್ಚಿಟ್ಟ ವಾರ್ನರ್, ಭವಿಷ್ಯದಲ್ಲಿ ಕೋಚ್​ ಹುದ್ದೆಗೇರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಹೌದು, ನಾನು ಭವಿಷ್ಯದಲ್ಲಿ ಕೋಚಿಂಗ್‌ಗೆ ಸೇರಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೆ ಆಸೀಸ್ ಕ್ರಿಕೆಟಿಗರು ಹೆಸರುವಾಸಿಯಾಗಿರುವ ಸ್ಲೆಡ್ಡಿಂಗ್ ಬಗ್ಗೆಯೂ ವಾರ್ನರ್ ದೊಡ್ಡ ಹೇಳಿಕೆ ನೀಡಿದ್ದಾರೆ.

3 / 6
ಐಪಿಎಲ್‌ನಂತಹ ದೇಶೀಯ ಸ್ಪರ್ಧೆಗಳಲ್ಲಿ ಆಟಗಾರರು ಪರಸ್ಪರ ಡ್ರೆಸ್ಸಿಂಗ್ ರೂಮ್‌ಗಳನ್ನು ಹಂಚಿಕೊಳ್ಳುವುದರಿಂದ ಮುಂದಿನ ದಶಕದಲ್ಲಿ ಸ್ಲೆಡ್ಜಿಂಗ್ ಕ್ರಿಕೆಟ್‌ನಿಂದ ದೂರವಾಗಲಿದೆ ಎಂದು ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ. ನಾನು ತಂಡಕ್ಕೆ ಬಂದಾಗ ಎದುರಾಳಿ ಆಟಗಾರರಿಗೆ ಕಿರುಕುಳ ನೀಡುವುದು ಮತ್ತು ಬ್ಯಾಟಿಂಗ್ ಮಾಡುವಾಗ ಅವರ ಗಮನವನ್ನು ಬೇರೆಡೆ ಸೆಳೆಯುವುದು ನನ್ನ ಕೆಲಸವಾಗಿತ್ತು ಎಂದು ವಾರ್ನರ್ ಹೇಳಿದ್ದಾರೆ.

4 / 6
ಐಪಿಎಲ್‌ನಂತಹ ಫ್ರಾಂಚೈಸಿ ಟಿ20 ಲೀಗ್‌ಗಳಲ್ಲಿ ಆಟಗಾರರು ಎದುರಾಳಿ ದೇಶಗಳ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಸ್ಲೆಡ್ಜಿಂಗ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಭವಿಷ್ಯದಲ್ಲಿ ನೀವು ಸ್ಲೆಡ್ಡಿಂಗ್ ಅಥವಾ ಅಂತಹದನ್ನು ನೋಡುತ್ತೀರಿ ಎಂದು ನಾನು ಭಾವಿಸುವುದಿಲ್ಲ ಎಂದು ವಾರ್ನರ್ ಹೇಳಿದ್ದಾರೆ.

5 / 6
ಡೇವಿಡ್ ವಾರ್ನರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಆಸ್ಟ್ರೇಲಿಯಾ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿರುವ ವಾರ್ನರ್ 112 ಟೆಸ್ಟ್ ಪಂದ್ಯಗಳಲ್ಲಿ 26 ಶತಕ ಸಹಿತ 8695 ರನ್ ಗಳಿಸಿದ್ದಾರೆ. ಇದಲ್ಲದೆ 161 ಏಕದಿನ ಪಂದ್ಯಗಳಲ್ಲಿ 6932 ರನ್ ಮತ್ತು 99 ಟಿ20 ಪಂದ್ಯಗಳಲ್ಲಿ 3894 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಾರ್ನರ್ 22 ಶತಕಗಳನ್ನು ಸಿಡಿಸಿದ್ದಾರೆ.

6 / 6
Follow us
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ