- Kannada News Photo gallery Cricket photos Deepika padukone played badminton with pv sindhu see Photos
ದೀಪಿಕಾ ಪಡುಕೋಣೆ vs ಪಿವಿ ಸಿಂಧು! ಇಬ್ಬರ ನಡುವೆ ಬ್ಯಾಡ್ಮಿಂಟನ್ ಪಂದ್ಯ; ಬಯೋಪಿಕ್ಗೆ ತಯಾರಿಯಾ?
ಸದ್ಯ ಕೆಲ ಸಮಯಗಳಿಂದ ದೀಪಿಕಾ ಹಾಗೂ ಸಿಂಧು ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ‘ಪಿವಿ ಸಿಂಧು ಬಯೋಪಿಕ್ ಸದ್ಯದಲ್ಲಿಯೇ ಬರಲಿದೆ…’ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ‘ಬಯೋಪಿಕ್ಗೆ ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ.
Updated on:Sep 22, 2021 | 10:15 PM

ಖ್ಯಾತ ನಟಿ ದೀಪಿಕಾ ಪಡುಕೋಣೆ, ಭಾರತದ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿ, ಬ್ಯಾಡ್ಮಿಂಟನ್ ನಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಅವರು ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ನಲ್ಲಿ, ಅವರು ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವುದು ಕಂಡುಬಂದಿದೆ.

ಇದು ಮಾಮೂಲಿಯಂತೆ ಮತ್ತೊಂದು ದಿನ. ಸಿಂಧು ಅವರೊಂದಿಗೆ ಆಟವಾಡುತ್ತಾ ಕ್ಯಾಲೋರಿಗಳನ್ನು ಕಳೆದುಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡು ದೀಪಿಕಾ ಆಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪುತ್ರಿಯಾಗಿರುವ ದೀಪಿಕಾ, ಸಿಂಧುಗೆ ಭರ್ಜರಿ ಪ್ರತಿರೋಧವನ್ನೇ ಒಡ್ಡಿದ್ದಾರೆ.

ಪಿವಿ ಸಿಂಧು ಭಾರತದ ಪ್ರಮುಖ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ. ಇತ್ತೀಚಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ನಟಿ ಮಾತ್ರವಲ್ಲದೆ, ದೀಪಿಕಾ ಕೂಡ ಬ್ಯಾಡ್ಮಿಂಟನ್ ಆಟಗಾರ್ತಿ. ಏತನ್ಮಧ್ಯೆ, ಅವರು ಮತ್ತು ಸಿಂಧು ಒಳ್ಳೇಯ ಸ್ನೇಹಿತರು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಸದ್ಯ ಕೆಲ ಸಮಯಗಳಿಂದ ದೀಪಿಕಾ ಹಾಗೂ ಸಿಂಧು ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ‘ಪಿವಿ ಸಿಂಧು ಬಯೋಪಿಕ್ ಸದ್ಯದಲ್ಲಿಯೇ ಬರಲಿದೆ…’ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ‘ಬಯೋಪಿಕ್ಗೆ ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ತಾರೆಯರು ಉತ್ತರಿಸದಿದ್ದರೂ, ಬಯೋಪಿಕ್ಗಾಗಿ ಅಭಿಮಾನಿಗಳು ಕಾಯುತ್ತಿರುವುದು ಸುಳ್ಳಲ್ಲ.

ದೀಪಿಕಾ ಕಪ್ಪು ಉಡುಪಿನಲ್ಲಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡುತ್ತಿರುವುದು ಕಂಡುಬರುತ್ತದೆ. ಈ ಸಮಯದಲ್ಲಿ, ಕೆಲವು ಅಭಿಮಾನಿಗಳು, ದೀಪಿಕಾ ಆಟದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
Published On - 10:10 pm, Wed, 22 September 21




