
2026 ರ ಮಹಿಳಾ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು ಎದುರಿಸಿದ ಹರ್ಮನ್‌ಪ್ರೀತ್ ಪಡೆ 94 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 159 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಥೈಲ್ಯಾಂಡ್ 65 ರನ್ಗಳಿಗೆ ಆಲೌಟ್ ಆಯಿತು. ಥೈಲ್ಯಾಂಡ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ದೀಪ್ತಿ ಶರ್ಮಾ ಪ್ರಮುಖ ಪಾತ್ರವಹಿಸಿದರು(PC-PTI).
ಈ ಪಂದ್ಯದಲ್ಲಿ ಕೇವಲ 1.1 ಓವರ್ಗಳನ್ನು ಬೌಲ್ ಮಾಡಿದ ದೀಪ್ತಿ ಒಂದೇ ಒಂದು ರನ್ ನೀಡಿದೆ ಪ್ರಮುಖ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಈ ಪಂದ್ಯವನ್ನು ಸ್ಮರಣೀಯಗೊಳಿಸಿದರು. ವಾಸ್ತವವಾಗಿ ಈ ಪಂದ್ಯ ದೀಪ್ತಿ ಶರ್ಮಾ ಅವರಿಗೆ ಸ್ಮರಣೀಯವಾಗಿತ್ತು. ಏಕೆಂದರೆ ಇದು ಅವರ 150 ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿತ್ತು(PC-PTI).
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಮಹಿಳಾ ಆಟಗಾರ್ತಿಯರಲ್ಲಿ ದೀಪ್ತಿ ಮೂರನೇ ಸ್ಥಾನಕ್ಕೇರಿದರು. ದೀಪ್ತಿಗಿಂತ ಮೊದಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಈ ಸಾಧನೆ ಮಾಡಿದ್ದರು. ಇದರ ಜೊತೆಗೆ ದೀಪ್ತಿ ತಮ್ಮ ಬೌಲಿಂಗ್ನಲ್ಲೂ ಇತಿಹಾಸ ಸೃಷ್ಟಿಸಿದರು(PC-PTI).
ಥೈಲ್ಯಾಂಡ್ ವಿರುದ್ಧ 3 ವಿಕೆಟ್‌ಗಳನ್ನು ಕಬಳಿಸಿದ ದೀಪ್ತಿ ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಇದೀಗ ಅಗ್ರಸ್ಥಾನಕ್ಕೇರಿದ್ದಾರೆ. ಏಷ್ಯಾಕಪ್ ಆರಂಭಕ್ಕೂ ಮುನ್ನ ದೀಪ್ತಿ ಮತ್ತು ಥೈಲ್ಯಾಂಡ್ ತಂಡದ ಆಟಗಾರ್ತಿ ತಿಪಾಚಾ ತಲಾ 168 ವಿಕೆಟ್‌ಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ದೀಪ್ತಿ ಥೈಲ್ಯಾಂಡ್ ವಿರುದ್ಧ 3 ವಿಕೆಟ್ ಕಬಳಿಸುವ ಮೂಲಕ ತಿಪಾಚಾ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದರು(PC-PTI).
ದೀಪ್ತಿ ಶರ್ಮಾ ಈಗ ಮಹಿಳಾ ಟಿ20ಕ್ರಿಕೆಟ್‌ನಲ್ಲಿ ಒಟ್ಟು 171 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಿಪಾಚಾ ಪುಟ್ಟವಾಂಗ್ ಒಟ್ಟು 170 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.ಮೂರನೇ ಸ್ಥಾನದಲ್ಲಿರುವ ಹೆನ್ರಿಯೆಟ್ ಇಶಿಮ್ವೆ ಒಟ್ಟು 164 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದುವರೆಗೆ ಒಟ್ಟು 154 ವಿಕೆಟ್‌ಗಳನ್ನು ಪಡೆದಿರುವ ಸೋಫಿ ಎಕ್ಲೆಸ್ಟೋನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಕ್ಯಾರಿ ಚಾನ್ 153 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ(PC-PTI).