- Kannada News Photo gallery Cricket photos Dinesh Karthik Ends Fans Wait Provides Huge Update On Jasprit Bumrahs Comeback Date
Jasprit Bumrah: ಟೀಂ ಇಂಡಿಯಾಕ್ಕೆ ಬುಮ್ರಾ ರೀ ಎಂಟ್ರಿ ಯಾವಾಗ? ಕಾರ್ತಿಕ್ ನೀಡಿದ್ರು ಬಿಗ್ ಅಪ್ಡೇಟ್
Jasprit Bumrah: ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ದಿನೇಶ್ ಕಾರ್ತಿಕ್ ಕಾಮೆಂಟರಿ ನೀಡ್ತಿದ್ದಾರೆ. ಈ ವೇಳೆ ಗಾಯಕ್ಕೀಡಾಗಿರುವ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಕಮ್ಬ್ಯಾಕ್ ಬಗ್ಗೆ ಕಾರ್ತಿಕ್ ಹೇಳಿಕೊಂಡಿದ್ದಾರೆ.
Updated on: Jun 11, 2023 | 4:29 PM

ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ದುರದೃಷ್ಟವಶಾತ್ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಗೈರುಹಾಜರಾಗಿದ್ದಾರೆ. ಇಂಜುರಿಯಿಂದಾಗಿ ಕಳೆದ ಸೆಪ್ಟೆಂಬರ್ 2022 ರಿಂದ ಟೀಂ ಇಂಡಿಯಾದಿಂದ ಹೊರಗಿರುವ ಬುಮ್ರಾ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದನ್ನು ದಿನೇಶ್ ಕಾರ್ತಿಕ್ ಬಹಿರಂಗಗೊಳಿಸಿದ್ದಾರೆ.

ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ದಿನೇಶ್ ಕಾರ್ತಿಕ್ ಕಾಮೆಂಟರಿ ನೀಡ್ತಿದ್ದಾರೆ. ಈ ವೇಳೆ ಗಾಯಕ್ಕೀಡಾಗಿರುವ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಕಮ್ಬ್ಯಾಕ್ ಬಗ್ಗೆ ಕಾರ್ತಿಕ್ ಹೇಳಿಕೊಂಡಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಗೆ ಕಮ್ಬ್ಯಾಕ್ ಮಾಡಲು ಬೂಮ್ರಾ ಪ್ರಯತ್ನಿಸ್ತಿದ್ದಾರೆ ಅಂತ ಕಾರ್ತಿಕ್ ಮಾಹಿತಿ ನೀಡಿದ್ದಾರೆ.

ಆಗಸ್ಟ್‌ನಲ್ಲಿ, ಭಾರತವು ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸವನ್ನು ನಿಗದಿಪಡಿಸಿದ್ದು, ತಿಂಗಳ ಮೂರನೇ ವಾರದಲ್ಲಿ ಈ ಸರಣಿ ಆರಂಭವಾಗಲಿದೆ. ಸೆಪ್ಟೆಂಬರ್‌ನಿಂದ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದಾಗಿ ಅವರು ತಮ್ಮ ಕಾರ್ಯಕ್ಷಮತೆಯನ್ನು ಟಿ20ಯಲ್ಲಿ ಪರೀಕ್ಷಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದು ಮುಂಬರುವ ಏಕದಿನ ವಿಶ್ವಕಪ್ಗೂ ಸಹಕಾರಿಯಾಗಲಿದೆ.

ಈ ವರ್ಷದ ಆರಂಭದಲ್ಲಿ ಬುಮ್ರಾ ಅವರನ್ನು ಏಕದಿನ ತಂಡಕ್ಕೆ ಸೇರಿಸಲಾಗಿದ್ದರೂ, ಅಂತಿಮವಾಗಿ ಅವರನ್ನು ತಂಡದಿಂದ ಹೊರಗಿಡಲಾಯಿತು. ಆ ಬಳಿಕ ಬುಮ್ರಾ ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಬುಮ್ರಾ ಕ್ರೀಡೆಗೆ ಮರಳುವತ್ತ ಗಮನಹರಿಸಿದ್ದಾರೆ.

ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಸರಣಿಯ ಮೊದಲು, ಟೀಮ್ ಇಂಡಿಯಾ ಜುಲೈನಿಂದ ಆಗಸ್ಟ್‌ವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಸಮಗ್ರ ಸರಣಿಯಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದೆ. ಸದ್ಯ ಡಬ್ಲ್ಯುಟಿಸಿ ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ಬರೋಬ್ಬರಿ 1 ತಿಂಗಳವರೆಗೆ ಯಾವುದೇ ಟೂರ್ನಿ ಆಡುವುದಿಲ್ಲ. ನಂತರ ಜುಲೈ ಮೊದಲ ವಾರದಲ್ಲಿ ಕೆರಿಬಿಯನ್ ನಾಡಿಗೆ ಪ್ರಯಾಣ ಬೆಳೆಸಲಿದೆ.



















