AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸಾರ್ವಕಾಲಿಕ ಪ್ಲೇಯಿಂಗ್ XI ಹೆಸರಿಸಿದ ಡಿಕೆ: ಧೋನಿಗಿಲ್ಲ ಸ್ಥಾನ

ಟೀಮ್ ಇಂಡಿಯಾ ಪರ ಎಲ್ಲಾ ಸ್ವರೂಪಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಆಲ್​ಟೈಮ್ ಬೆಸ್ಟ್ ಪ್ಲೇಯಿಂಗ್ ಇಲೆವೆನ್​ ಅನ್ನು ದಿನೇಶ್ ಕಾರ್ತಿಕ್ ಹೆಸರಿಸಿದ್ದಾರೆ. ಈ ಇಲೆವೆನ್​ನಲ್ಲಿ ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್​ ಅವರನ್ನು ಆಯ್ಕೆ ಮಾಡಿದರೂ, ಟೀಮ್ ಇಂಡಿಯಾ ಬೆಸ್ಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸ್ಥಾನ ನೀಡಲಾಗಿಲ್ಲ.

ಝಾಹಿರ್ ಯೂಸುಫ್
|

Updated on: Aug 17, 2024 | 1:10 PM

Share
ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಭಾರತದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಆದರೆ ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.

1 / 5
ಟೀಮ್ ಇಂಡಿಯಾ ಪರ ಧೋನಿ 14 ವರ್ಷಗಳ ಕಾಲ ಆಡಿದ್ದಾರೆ. ಇದೇ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15,000 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇನ್ನು ನಾಯಕನಾಗಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ (2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, ಮತ್ತು 2013ರ ಚಾಂಪಿಯನ್ಸ್ ಟ್ರೋಫಿ) ಹಿರಿಮೆಯನ್ನು ಸಹ ಹೊಂದಿದ್ದಾರೆ. ಇದಾಗ್ಯೂ ಡಿಕೆ ತಮ್ಮ ಆಲ್​ಟೈಮ್ ಪ್ಲೇಯಿಂಗ್ 11 ನಲ್ಲಿ ಧೋನಿಗೆ ಸ್ಥಾನ ನೀಡದಿರುವುದು ಅಚ್ಚರಿ.

2 / 5
ಇನ್ನು ದಿನೇಶ್ ಕಾರ್ತಿಕ್ ಹೆಸರಿಸಿದ ಟೀಮ್ ಇಂಡಿಯಾದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕರಾಗಿ ಡ್ಯಾಶಿಂಗ್ ಓಪನರ್​ಗಳಾದ ವೀರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಇದ್ದರೆ, ಸಚಿನ್ ತೆಂಡೂಲ್ಕರ್ ಅವರನ್ನು 4ನೇ ಕ್ರಮಾಂಕಕ್ಕೆ ಹೆಸರಿಸಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

3 / 5
ಈ ಇಲೆವೆನ್​ನಲ್ಲಿ ಆಲ್​ರೌಂಡರ್​ಗಳಾಗಿ ಯುವರಾಜ್ ಸಿಂಗ್ ಹಾಗೂ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿದೆ. ಹಾಗೆಯೇ ವೇಗಿಗಳಾಗಿ ಝಹೀರ್ ಖಾನ್ ಹಾಗೂ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಅವರನ್ನು ದಿನೇಶ್ ಕಾರ್ತಿಕ್ 12ನೇ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ಡಿಕೆ ಹೆಸರಿಸಿದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ ಈ ಕೆಳಗಿನಂತಿದೆ...

4 / 5
ದಿನೇಶ್ ಕಾರ್ತಿಕ್ ಅವರ ಭಾರತದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್: ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಝಹೀರ್ ಖಾನ್. ಹರ್ಭಜನ್ ಸಿಂಗ್.

5 / 5