- Kannada News Photo gallery Cricket photos England Cricketer Danielle Wyatt Marries Lesbian Partner Georgie Hodge
ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ, ಗೆಳೆತಿಯನ್ನ ವಿವಾಹವಾದ ಇಂಗ್ಲೆಂಡ್ ಆಟಗಾರ್ತಿ
Danielle Wyatt - Georgie Hodge: ಇಂಗ್ಲೆಂಡ್ ತಂಡದ ಆಲ್ರೌಂಡರ್ ಡೇನಿಯಲ್ ವ್ಯಾಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದು ಸಹ ತಮ್ಮ ಗೆಳೆತಿಯ ಜೊತೆ ಎಂಬುದು ವಿಶೇಷ. ಅಂದರೆ ತಮ್ಮ ಬಹುಕಾಲದ ಗೆಳೆತಿ ಜಾರ್ಜಿ ಹಾಡ್ಜ್ ಜೊತೆ ಡೇನಿಯಲ್ ವ್ಯಾಟ್ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
Updated on: Jun 12, 2024 | 3:25 PM

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ (Danielle Wyatt) ತನ್ನ ಬಹುಕಾಲದ ಗೆಳೆತಿ ಜಾರ್ಜಿ ಹಾಡ್ಜ್ (Georgie Hodge) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹವಾದ ಬೆನ್ನಲ್ಲೇ ಡೇನಿಯಲ್ ವ್ಯಾಟ್ ಹೆಸರು ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.

ಇದಕ್ಕೆ ಮುಖ್ಯ ಕಾರಣ ಡೇನಿಯಲ್ ವ್ಯಾಟ್ ಈ ಹಿಂದೆ ವಿರಾಟ್ ಕೊಹ್ಲಿಯನ್ನು ಪ್ರಪೋಸ್ ಮಾಡಿರುವುದು. 2014 ರಲ್ಲಿ ವ್ಯಾಟ್, ಸೋಷಿಯಲ್ ಮೀಡಿಯಾ ಮೂಲಕ "ನನ್ನನ್ನು ಮದುವೆಯಾಗು" ಎಂದು ಪ್ರಪೋಸ್ ಮಾಡಿದ್ದರು. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದೀಗ ಡೇನಿಯಲ್ ವ್ಯಾಟ್ ತಮ್ಮ ಬಹುಕಾಲದ ಗೆಳೆತಿಯೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ಅದರಂತೆ ಇತ್ತೀಚೆಗೆ ಈ ಜೋಡಿ ಸಾಂಪ್ರಾದಾಯಿಕವಾಗಿ ಮದುವೆಯಾಗಿದ್ದು, ಇದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಡೇನಿಯಲ್ ವ್ಯಾಟ್ ಅವರ ಸಂಗಾತಿ ಜಾರ್ಜಿ ಹಾಡ್ಜ್ CAA ಬೇಸ್ ಮಹಿಳಾ ಫುಟ್ಬಾಲ್ ತಂಡದ ಮುಖ್ಯಸ್ಥರಾಗಿದ್ದಾರೆ. ಡೇನಿಯಲ್ ಮತ್ತು ಜಾರ್ಜಿ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇದೀಗ ಇಬ್ಬರೂ ಮದುವರೆಯಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

33 ವರ್ಷದ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ಪರ 110 ಏಕದಿನ ಮತ್ತು 156 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ 1907 (ಏಕದಿನ) ಮತ್ತು 2726 (ಟಿ20) ರನ್ ಕಲೆಹಾಕಿದ್ದಾರೆ. ಅಲ್ಲದೆ ಈ ವೇಳೆ ಒಟ್ಟು 73 ವಿಕೆಟ್ಗಳನ್ನು ಕಬಳಿಸಿದ್ದಾರೆ.
