AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fastest Test Century: ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ್ದು ಯಾರು ಗೊತ್ತಾ?

Fastest Test Century: ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಆಟಗಾರ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಮೆಕಲಂ ಬ್ಯಾಟ್​ನಿಂದ 6 ಭರ್ಜರಿ ಸಿಕ್ಸ್ ಹಾಗೂ 21 ಫೋರ್​ಗಳು ಮೂಡಿಬಂತು.

ಝಾಹಿರ್ ಯೂಸುಫ್
|

Updated on: Feb 20, 2023 | 10:58 PM

ಅದು 2016, ಫೆಬ್ರವರಿ 20...ಕ್ರೈಸ್ಟ್​​ಚರ್ಚ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 32 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ಆಸ್ಟ್ರೇಲಿಯಾ ತಂಡವು ಮೇಲುಗೈ ಸಾಧಿಸಿತು. ಅದು ಬ್ರೆಂಡನ್ ಮೆಕಲಂ ಕಣಕ್ಕಿಳಿಯುವ ತನಕ ಮಾತ್ರ.

1 / 9
ಏಕೆಂದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೆಂಡನ್ ಮೆಕಲಂ ಆಸ್ಟ್ರೇಲಿಯಾ ಬೌಲರ್​ಗಳ ಚಳಿ ಬಿಡಿಸಿದರು. ಅದುವರೆಗೆ ಕರಾರುವಾಕ್ ದಾಳಿ ಸಂಘಟಿಸಿದ್ದ ಆಸೀಸ್ ಬೌಲರ್​ಗಳನ್ನು ಮೆಕಲಂ ಬೆಂಡೆತ್ತಿದ್ದರು. ಟೆಸ್ಟ್​ ಕ್ರಿಕೆಟ್​ನ್ಲಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಆಟಗಾರ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಮೆಕಲಂ ಬ್ಯಾಟ್​ನಿಂದ 6 ಭರ್ಜರಿ ಸಿಕ್ಸ್ ಹಾಗೂ 21 ಫೋರ್​ಗಳು ಮೂಡಿಬಂತು.

2 / 9
ಇತ್ತ ಕಿವೀಸ್ ಬ್ಯಾಟರ್​ನ ಸಿಡಿಲಬ್ಬರದ ಮುಂದೆ ಆಸ್ಟ್ರೇಲಿಯಾ ಬೌಲರ್​ಗಳು ಮಂಕಾದರು. ಅದರಂತೆ 79 ಎಸೆತಗಳಲ್ಲಿ 145 ರನ್​ ಬಾರಿಸಿ ಮೆಕಲಂ ವಿಕೆಟ್ ಒಪ್ಪಿಸಿದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಬ್ರೆಂಡನ್ ಮೆಕಲಂ ಶತಕ ಪೂರೈಸಿದ್ದು ಕೇವಲ 54 ಎಸೆತಗಳಲ್ಲಿ. ಇದು ಟೆಸ್ಟ್​ ಕ್ರಿಕೆಟ್​ನ ಅತ್ಯಂತ ವೇಗದ ಶತಕವಾಗಿದೆ. ಈ ವಿಶ್ವ ದಾಖಲೆಗೆ ಇಂದು 7 ವರ್ಷಗಳು. ಹಾಗಿದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಟಾಪ್-5 ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ಎಂದು ನೋಡೋಣ...

3 / 9
1- ಬ್ರೆಂಡನ್ ಮೆಕಲಂ ( ನ್ಯೂಜಿಲೆಂಡ್): 2016 ರಲ್ಲಿ ನ್ಯೂಜಿಲೆಂಡ್​ನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಬ್ರೆಂಡನ್ ಮೆಕಲಂ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.

4 / 9
2- ವಿವ್ ರಿಚರ್ಡ್ಸ್ ​(ವೆಸ್ಟ್ ಇಂಡೀಸ್): 1985 ರಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ ರಿಚರ್ಡ್ಸ್ ಇಂಗ್ಲೆಂಡ್ ವಿರುದ್ದ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 3 ದಶಕಗಳ ಕಾಲ ವಿಶ್ವ ದಾಖಲೆಯಾಗಿ ಉಳಿದಿದ್ದ ಈ ಇನಿಂಗ್ಸ್ ದಾಖಲೆಯನ್ನು 2016 ರಲ್ಲಿ ಮೆಕಲಂ ಅಳಿಸಿ ಹಾಕಿದ್ದರು.

5 / 9
3- ಮಿಸ್ಬಾ ಉಲ್ ಹಕ್ (ಪಾಕಿಸ್ತಾನ್): 2014 ರಲ್ಲಿ ಮಿಸ್ಬಾ ಉಲ್ ಹಕ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿ ವಿವ್ ರಿಚರ್ಡ್ಸ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

6 / 9
4- ಆ್ಯಡಂ ಗಿಲ್​ಕ್ರಿಸ್ಟ್​ (ಆಸ್ಟ್ರೇಲಿಯಾ): 2006 ರಲ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಇನಿಂಗ್ಸ್​ನಲ್ಲಿ ಗಿಲ್​ಕ್ರಿಸ್ಟ್ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದ್ದರು.

7 / 9
5- ಜ್ಯಾಕ್ ಗ್ರೆಗೊರಿ (ಆಸ್ಟ್ರೇಲಿಯಾ): 1921 ರಲ್ಲಿ ಸೌತ್ ಆಫ್ರಿಕಾ ವಿರುದ್ದ ಗ್ರೆಗೊರಿ ಕೇವಲ 67 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಈ ದಾಖಲೆಯನ್ನು 6 ದಶಕಗಳ ಬಳಿಕ ವಿವ್ ರಿಚರ್ಡ್ಸ್ ಮುರಿದಿದ್ದರು.

8 / 9
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತೀ ವೇಗದ ಶತಕ ಬಾರಿಸಿದ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. 1987 ರಲ್ಲಿ ಕಪಿಲ್ ದೇವ್ ಶ್ರೀಲಂಕಾ ವಿರುದ್ದ ಕೇವಲ 74 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.

9 / 9
Follow us
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ

‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್

ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ

VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ

ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್

VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ