ಸಾರ್ವಕಾಲಿಕ ಭಾರತೀಯ ಏಕದಿನ ಇಲೆವೆನ್ ಹೆಸರಿಸಿದ ಗೌತಮ್ ಗಂಭೀರ್: ರೋಹಿತ್ ಶರ್ಮಾಗೆ ಇಲ್ಲ ಸ್ಥಾನ
Gautam Gambhir: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಸೆಪ್ಟೆಂಬರ್ 19ರವರೆಗೆ ಟೀಮ್ ಇಂಡಿಯಾಗೆ ಯಾವುದೇ ಪಂದ್ಯವಿಲ್ಲ. ಹೀಗಾಗಿ ಭಾರತೀಯ ಆಟಗಾರರು ಸೇರಿದಂತೆ ಕೋಚಿಂಗ್ ಸಿಬ್ಬಂದಿಗಳು ರಜಾವಧಿಯಲ್ಲಿದ್ದಾರೆ. ಇನ್ನು ಸೆಪ್ಟೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಶುರುವಾಗಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಶಿಬಿರದಲ್ಲಿ ಜೊತೆಗೂಡಲಿದ್ದಾರೆ.