AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ವಿರುದ್ಧ ತೂಫಾನ್ ಶತಕ ಸಿಡಿಸಿದ ​ಎಲ್ಲಿಸ್ ಪೆರ್ರಿ

Australia Women vs India Women: ಭಾರತ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಜಾರ್ಜಿಯಾ ವೊಲ್ ಹಾಗೂ ಎಲ್ಲಿಸ್ ಪೆರ್ರಿ ಆಕರ್ಷಕ ಶತಕ ಬಾರಿಸಿದ್ದು, ಈ ಶತಕಗಳ ನೆರವಿನಿಂದ ಟೀಮ್ ಇಂಡಿಯಾಗೆ 372 ರನ್​​ಗಳ ಗುರಿ ನೀಡಿದೆ.

ಝಾಹಿರ್ ಯೂಸುಫ್
|

Updated on: Dec 08, 2024 | 9:31 AM

Share
ಬ್ರಿಸ್ಬೇನ್​​ನಲ್ಲಿ ನಡೆಯುತ್ತಿರುವ ಭಾರತ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ತಹ್ಲಿಯಾ ಮೆಕ್​​ಗ್ರಾಥ್ ಬ್ಯಾಟಿಂಗ್ ಆಯ್ದುಕೊಂಡರು.

1 / 5
ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಫೋಬೆ ಲಿಚ್​ಫೀಲ್ಡ್ ಹಾಗೂ ಜಾರ್ಜಿಯಾ ವೊಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​​ಗೆ 130 ರನ್​​ಗಳ ಜೊತೆಯಾಟವಾಡಿದ ಬಳಿಕ ಫೋಬೆ ಲಿಚ್​ಫೀಲ್ಡ್ (60) ಔಟಾದರು.

2 / 5
ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಜಾರ್ಜಿಯಾ ವೊಲ್ 87 ಎಸೆತಗಳಲ್ಲಿ 12 ಫೋರ್​​ಗಳೊಂದಿಗೆ 101 ರನ್ ಬಾರಿಸಿದರು. ಈ ಶತಕದ ಬೆನ್ನಲ್ಲೇ ಜಾರ್ಜಿಯಾ ಸೈಮಾ ಠಾಕೂರ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

3 / 5
ಜಾರ್ಜಿಯಾ ವಿಕೆಟ್ ಪತನವಾಗುತ್ತಿದ್ದಂತೆ ಇತ್ತ ಎಲ್ಲಿಸ್ ಪೆರ್ರಿ ಅಬ್ಬರ ಶುರು ಮಾಡಿದರು. ಟೀಮ್ ಇಂಡಿಯಾ ಬೌಲರ್​​ಗಳನ್ನು ಮನಸೋ ಇಚ್ಛೆ ದಂಡಿಸಿದ ಪೆರ್ರಿ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​​ಗಳ ಸುರಿಮಳೆಗೈದರು. ಈ ಸ್ಪೋಟಕ ಬ್ಯಾಟಿಂಗ್​​ ನೆರವಿನಿಂದ ಕೇವಲ 72 ಎಸೆತಗಳಲ್ಲಿ ಶತಕ ಪೂರೈಸಿದರು.

4 / 5
ಅಂತಿಮವಾಗಿ 75 ಎಸೆತಗಳನ್ನು ಎದುರಿಸಿದ ಎಲ್ಲಿಸ್ ಪೆರ್ರಿ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್​​ಗಳೊಂದಿಗೆ 105 ರನ್ ಬಾರಿಸಿದರು. ಈ ಆಕರ್ಷಕದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 50 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 371 ರನ್ ಕಲೆಹಾಕಿದೆ.

5 / 5
ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ