26 ಸಿಕ್ಸ್, 17 ಫೋರ್​: RCBಯಿಂದ ಹೊರಬಿದ್ದ ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಲಬ್ಬರ

|

Updated on: Jan 21, 2025 | 10:54 AM

Glenn Maxwell: ಐಪಿಎಲ್ 2024 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 52 ರನ್​ಗಳು ಮಾತ್ರ. ಆದರೆ ಇದೀಗ ಫಾರ್ಮ್ ಕಂಡುಕೊಂಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 26 ಸಿಕ್ಸ್ ಹಾಗೂ 17 ಫೋರ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

1 / 5
ಆಸ್ಟ್ರೇಲಿಯಾ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಬಳಿಕ ಎಂಬುದು ವಿಶೇಷ. ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಮ್ಯಾಕ್ಸ್​ವೆಲ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದರು.

2 / 5
ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿನ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಕಳಪೆ ಫಾರ್ಮ್. IPL 2024 ರಲ್ಲಿ ಆರ್​ಸಿಬಿ ಪರ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್​ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಮ್ಯಾಕ್ಸ್​ವೆಲ್​ಗೆ ತಂಡದಿಂದ ಗೇಟ್ ಪಾಸ್ ನೀಡಿದ್ದರು.

3 / 5
ಹೀಗೆ ಹೊರಬಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 4.20 ಕೋಟಿ ರೂ. ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಬ್ಯಾಟ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಅದರಲ್ಲೂ ಬಿಗ್ ಬ್ಯಾಷ್​ ಲೀಗ್​ನಲ್ಲಿ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

4 / 5
ಈ ಬಾರಿಯ ಬಿಗ್ ಬ್ಯಾಷ್ ಲೀಗ್​ನಲ್ಲಿ ಈವರೆಗೆ 8 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 297 ರನ್​ ಕಲೆಹಾಕಿದ್ದಾರೆ. ಅದು ಕೂಡ ಕೇವಲ 153 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಮ್ಯಾಕ್ಸ್​ವೆಲ್ 194.1 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ ಎದುರಾಳಿ ಬೌಲರ್​​ಗಳ ಬೆಂಡೆತ್ತಿದ್ದಾರೆ. ಈ ವೇಳೆ ಮ್ಯಾಕ್ಸಿ ಬ್ಯಾಟ್​ನಿಂದ 26 ಭರ್ಜರಿ ಸಿಕ್ಸ್ ಹಾಗೂ 17 ಫೋರ್​ಗಳು ಸಿಡಿದಿವೆ.

5 / 5
ಗ್ಲೆನ್ ಮ್ಯಾಕ್ಸ್​ವೆಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಸತತ ಐದು ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೇರಿದೆ. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಗ್ಲೆನ್ ಮ್ಯಾಕ್ಸ್​ವೆಲ್ ಇದೇ ಸಿಡಿಲಬ್ಬರವನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸುವ ನಿರೀಕ್ಷೆಯಿದೆ. ಅಲ್ಲದೆ ಈ ಲಯದೊಂದಿಗೆ ಐಪಿಎಲ್​ನಲ್ಲೂ ಕಾಣಿಸಿಕೊಂಡರೆ, ಬೌಲರ್​ಗಳು  ಸಟ್ ಪಟ್ ದುಡುಂ ಆಗುವುದರಲ್ಲಿ ಅನುಮಾನವೇ ಇಲ್ಲ.